Home Advertisement
Home ಅಪರಾಧ ಕಲ್ಲಿನಿಂದ ಜಜ್ಜಿ ವ್ಯಕ್ತಿ ಬರ್ಬರ ಹತ್ಯೆ

ಕಲ್ಲಿನಿಂದ ಜಜ್ಜಿ ವ್ಯಕ್ತಿ ಬರ್ಬರ ಹತ್ಯೆ

0
50

ಕುಷ್ಟಗಿ: ತಾಲೂಕಿನ ಬೋದರು ಸೀಮಾ ವ್ಯಾಪ್ತಿಯ ಹೊಲ ಒಂದರಲ್ಲಿ ಇಲಕಲ್ ಮೂಲದ ಓರ್ವ ವ್ಯಕ್ತಿಯ ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಇಳಕಲ್ ಪಟ್ಟಣದ ಭೀಮರಾವ್ ಸುರೇಶ್(೩೨) ಕೊಲೆಯಾದ ಆಟೋ ಡ್ರೈವರ್. ಆಟೋದಲ್ಲಿ ಇಳಕಲ್‌ನಿಂದ ಕರೆದುಕೊಂಡು ಬಂದು ಬೋದರು ಸೀಮಾದ ಬ್ರಾಹ್ಮಣಿ ಗ್ರಾನೈಟ್ಸ್ ಹಿಂಭಾಗದ ಜಮೀನಿನಲ್ಲಿ ಕೆಲ ದುಷ್ಕರ್ಮಿಗಳು ಬೆತ್ತಲೆ ಮಾಡಿ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದ ವಂಟಿಗೋಡಿ, ಗಂಗಾವತಿ ಉಪವಿಭಾದ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ಸಿಪಿಐ ಯಶವಂತ ಬಸಳ್ಳಿ, ಪಿಎಸ್‌ಐ ಮುದ್ದುರಂಗಸ್ವಾಮಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Previous articleಇಬ್ಬರು ಪಿಯು ವಿದ್ಯಾರ್ಥಿಗಳು ಸಮುದ್ರಪಾಲು
Next articleಇದು ಕಂಪ್ಲೆಂಟ್ ಸರ್ಕಾರ