ಕನ್ನಡ ಚಲನಚಿತ್ರ ನಿರ್ಮಾಪಕ ಸ್ವಾಗತ್ ಬಾಬು ನಿಧನ

0
26

ಬೆಂಗಳೂರು: “ಸ್ವಾಗತ್” ಬಾಬು ಅಂತಲೇ ಹೆಸರುವಾಸಿಯಾಗಿದ್ದ ಕನ್ನಡ ಚಲನಚಿತ್ರಗಳ ನಿರ್ಮಾಪಕ ಹಾಗೂ ವಿತರಕರಾಗಿದ್ದ ಸ್ವಾಗತ್‌ ಬಾಬು ಅವರು ಮೃತಪಟ್ಟಿದ್ದಾರೆ.
ಅವರು ನಿರ್ಮಿಸಿದ್ದ ಚಂದ್ರಮುಖಿ ಪ್ರಾಣಸಖಿ, ಶ್ರೀರಸ್ತು ಶುಭಮಸ್ತು, ಸ್ಮೈಲ್ ಮುಂತಾದ ಸಿನಿಮಾಗಳು ಹಿಟ್‌ ಆಗಿದ್ದವು. ಇವಲ್ಲದೇ ಹಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು. ಸುದೀರ್ಘ 35 ವರ್ಷಗಳಿಂದ ಅವರು ಕನ್ನಡ ಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಚಿತ್ರ ನಿರ್ಮಾಣದ‌ ಜೊತೆ ವಿತರಣೆಯಲ್ಲಿ ಸ್ವಾಗತ್‌ ಬಾಬು ತೊಡಗಿಕೊಂಡಿದ್ದರು. ಸ್ವಾಗತ್ ಬಾಬು ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

Previous articleಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ ಸುದ್ದಿ ಕೇಳಿ ಯುವಕ ನೇಣಿಗೆ ಶರಣು
Next articleಪತ್ನಿಯ ತಲೆ ಕತ್ತರಿಸಿ, ಚರ್ಮ ಸುಲಿದು ವಿಕೃತಿ ಮೆರೆದ ಪತಿ