ಕನ್ನಡಿಗನಿಗೆ ಮಹಾಕುಂಭ ಮೇಳದ ಉಸ್ತುವಾರಿ

0
35

ಪ್ರಯಾಗ್​​ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪ್ರತಿದಿನ ದೇಶ, ವಿದೇಶಗಳ ಕೋಟ್ಯಂತರ ಜನರು ಪುಣ್ಯ ಸ್ನಾನ ಮಾಡಿ ಧನ್ಯರಾಗುತ್ತಿದ್ದಾರೆ. 144 ವರ್ಷಗಳ ನಂತರ ನಡೆಯುತ್ತಿರುವ ಈ ಐತಿಹಾಸಿಕ ಮಹಾಕುಂಭ ಮೇಳಕ್ಕೂ ಕನ್ನಡಿಗರು ಒಂದು ಸಂಬಂಧವಿರುವುದು ಇನ್ನೂ ವಿಶೇಷ.
ಹೌದು… ಈ ಹಿಂದೆ ನಡೆದ ಮಹಾಕುಂಭ ಮೇಳವನ್ನು ನೋಡಿದವರು ಯಾರೂ ಇಂದು ಇಲ್ಲ. ಇಂದು ನಡೆಯುತ್ತಿರುವ ಮಹಾಕುಂಭ ನೋಡಿದ ನಾವುಗಳು ಮುಂದಿನ 2169ರಲ್ಲಿ ನಡೆಯುವ ಮಹಾಕುಂಭದಲ್ಲಿ ಇರುವುದಿಲ್ಲ. ಆದರೆ, ಈ ಬಾರಿಯ ಮಹಾಕುಂಭ ಮೇಳದ ಸಂಪೂರ್ಣ ಉಸ್ತುವಾರಿ ವಹಿಸಿರುವುದು ಕನ್ನಡಿಗ ಎನ್ನುವುದು ನಮ್ಮ ಹೆಮ್ಮೆ.
ಬೆಂಗಳೂರಿನಲ್ಲಿ ಜನಿಸಿದ ದಕ್ಷ ಐಎಎಸ್​​ ಅಧಿಕಾರಿ ವಿಜಯ ಕಿರಣ್ ಆನಂದ್ ಅವರೇ ಮಹಾಕುಂಭ ಮೇಳದ ನೇತೃತ್ವ ವಹಿಸಿದ್ದಾರೆ.
2009ರ ಉತ್ತರ ಪ್ರದೇಶ ಕೇಡರ್​​ನ ಐಎಎಸ್​​ ಅಧಿಕಾರಿಯಾಗಿರುವ ವಿಜಯ ಕಿರಣ್ ಆನಂದ್ ಅವರು, ಸಿಎ ಪರೀಕ್ಷೆಯಲ್ಲಿಯೂ ಉತ್ತೀರ್ಣರಾಗಿದ್ದಾರೆ. ಈ ಹಿಂದೆ ವಿಜಯ ಕಿರಣ್ ಆನಂದ್ ಗೋರಖ್‌ಪುರ ಜಿಲ್ಲಾಧಿಕಾರಿಯಾಗಿದ್ದರು. ಈ ವೇಳೆ ಅವರ ದಕ್ಷತೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹತ್ತಿರದಿಂದ ನೋಡಿದ್ದರು. ಹೀಗಾಗಿ ಈಗ ಪ್ರಯಾಗರಾಜ್ ಜಿಲ್ಲಾಧಿಕಾರಿಯಾಗಿ ಅವರನ್ನೇ ನೇಮಿಸಿ ಮಹಾಕುಂಭ ಮೇಳದ ಮಹತ್ವದ ಜವಾಬ್ದಾರಿಯನ್ನು ನೀಡಿದ್ದಾರೆ.

Previous articleಉಪ ಲೋಕಾಯುಕ್ತರಿಂದ ಸರಕಾರಿ ಕಚೇರಿಗಳಿಗೆ ದಿಢೀರ್ ಭೇಟಿ
Next article8ನೇ ವೇತನ ಆಯೋಗದ ರಚನೆಗೆ ಸರ್ಕಾರ ಅನುಮೋದನೆ