ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ದಂಪತಿ ಸೆರೆ

0
23

ಸಂ.ಕ. ಸಮಾಚಾರ, ಉಡುಪಿ: ಐಪಿಎಲ್‌ ಕ್ರಿಕೆಟ್ ಬೆಟ್ಟಿಂಗ್ ಸಂಬಂಧ ದಂಪತಿಯನ್ನು ಉಡುಪಿ ಸೆನ್ ಪೊಲೀಸರು ಜೂ.3ರಂದು ಇಲ್ಲಿನ ಪೂರ್ಣಪ್ರಜ್ಞ ಕಾಲೇಜು ಸಮೀಪದ ಮನೆಯೊಂದರಿಂದ ಬಂಧಿಸಿದ್ದಾರೆ.
ಅನಂತ ಪಿ. ಹಾಗೂ ಆತನ ಪತ್ನಿ ವಾಣಿಶ್ರೀ ಬಂಧಿತರು. ಅವರಿಂದ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಿಪಿಸಿ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಅವರು ಕ್ರಿಕೆಟ್ ಬೆಟ್ಟಿಂಗ್ ವೈಬ್‌ ಸೈಟ್ ಮೂಲಕ ಐಪಿಎಲ್ ಕ್ರಿಕೆಟ್‌ನ ಫೈನಲ್‌ ಪಂದ್ಯಾಟಕ್ಕೆ ಸಂಬಂಧಿಸಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದರು.
ಈ ಬಗ್ಗೆ ದೊರೆತ ಖಚಿತ ಮಾಹಿತಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅನಂತ ಬೇರೆ ಬೇರೆ ವ್ಯಕ್ತಿಗಳಿಗೆ ಕರೆ ಮಾಡಿ ಅವರವರ ತಂಡವನ್ನು ತಿಳಿಸಿ ಅವರಿಂದ ಹಣ ಸಂಗ್ರಹ ಮಾಡುತ್ತಿದ್ದು, ವಾಟ್ಸಾಪ್ ಚಾಟ್ ಮೂಲಕ ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹಣ ನೀಡುವ ಒಪ್ಪಿಗೆಯ ಮೇರೆಗೆ ಪಂಥ ಸ್ವೀಕರಿಸಿದ್ದ. ಅದನ್ನು ಸಿದ್ದಾರ್ಥ ಎಂಟರ್ ಪ್ರೈಸಿಸ್ ಎಂಬ ಸ್ಥಂಸ್ಥೆಯ ಬ್ಯಾಂಕ್ ಖಾತೆ ಹಾಗೂ ಫೋನ್‌ ಪೇ ಮೂಲಕ ಹಣವನ್ನು ಪಣವಾಗಿಟ್ಟುಕೊಂಡಿದ್ದು, ಕ್ರಿಕೆಟ್ ಬೆಟ್ಟಿಂಗ್ ವ್ಯವಹಾರವನ್ನು ತನ್ನ ಮತ್ತು ಪತ್ನಿಯ ಬ್ಯಾಂಕ್ ಖಾತೆ ಮೂಲಕ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ನಾಲ್ವರ ಬಂಧನ
Next articleಜೂನ್ 9ರಂದು ಮಂಗಳೂರು ಭೇಟಿ ನೀಡಲಿರುವ ಬಿಜೆಪಿ ನಿಯೋಗ