ಬೆಂಗಳೂರು: ರಾಜ್ಯದಲ್ಲಿ ಏ. ೧೮ರಿಂದ ಸಿಇಟಿ ಪರೀಕ್ಷೆ ಆರಂಭವಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಏಪ್ರಿಲ್ ೧೮,೧೯ ಮತ್ತು ೨೦ರಂದು ಮೂರು ದಿನ ಪರೀಕ್ಷೆ ನಡೆಯಲಿದೆ. ಸಿಇಟಿಗೆ ಏಪ್ರಿಲ್ ೧೯ರಿಂದ ಪರೀಕ್ಷೆ ಆರಂಭಿಸಲು ಉದ್ದೇಶಿಸಲಾಗಿತ್ತು. ಏ.೨೧ರಂದು ನಡೆಯುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ನಡೆಸುವ ಎನ್‌ಡಿಎ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು ಹೀಗಾಗಿ ಸಿಇಟಿ ವೇಳಾಪಟ್ಟಿಯನ್ನು ಬದಲಾಯಿಸಿ ಏಪ್ರಿಲ್ ೧೮ರಿಂದ ೨೦ನೇ ತಾರೀಖಿನವರೆಗೆ ಪರೀಕ್ಷೆ ನಡೆಸಲು ಉದ್ದೇಶಿಸಲಾಯಿತು. ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳು ಎನ್‌ಡಿಎ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರೆ ಆ ಪರೀಕ್ಷೆಗೂ ಸಮರ್ಪಕವಾಗಿ ಸಿದ್ಧತೆ ನಡೆಸಿ. ಎನ್‌ಡಿಎಗೆ ಆಯ್ಕೆಯಾದರೆ ರಕ್ಷಣಾ ಪಡೆಯ ಆಫೀಸರ್ ಹುದ್ದೆಗಳನ್ನು ಪಡೆಯಬಹುದು.
ಸಿಇಟಿ ಪ್ರವೇಶ ಪತ್ರಗಳನ್ನು http://kea.kar.nic.in ವೆಬ್‌ಸೈಟ್‌ಗೆ ತೆರಳಿ ಡೌನ್‌ಲೌಡ್ ಮಾಡಿಕೊಳ್ಳಬಹುದು.
ಸಿಇಟಿ ವೇಳಾಪಟ್ಟಿ
ಏ. ೧೮- ಬೆಳಗ್ಗೆ ೧೦-೩೦ ಗಂಟೆಗೆ ಜೀವಶಾಸ್ತ್ರ ಪರೀಕ್ಷೆ ಮತ್ತು ಮಧ್ಯಾಹ್ನ ೨.೩೦ರಿಂದ ಗಣಿತ ಪರೀಕ್ಷೆ.
ಏ. ೧೯ ರಂದು ಬೆಳಗ್ಗೆ ೧೦-೩೦ ಗಂಟೆಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ೨.೩೦ಗಂಟೆಗೆ ರಸಾಯನ ಶಾಸ್ತ್ರ ಪರೀಕ್ಷೆ
ಏ. ೨೦ರಂದು ಹೊರನಾಡು ಮತ್ತು ಗಡಿನಾಡ ಕನ್ನಡಿಗರಿಗೆ ಭಾಷಾ ಪರೀಕ್ಷೆ ನಡೆಯಲಿದೆ.
(ಬೆಂಗಳೂರು, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಮಾತ್ರ ಭಾಷಾ ಪರೀಕ್ಷೆ ನಡೆಯಲಿದೆ)