ಎಸ್ ಜೆ ಕೋಟೆಯಲ್ಲಿ ಕೈ – ಕಮಲ ಮಾರಾಮಾರಿ

0
145

ಬಳ್ಳಾರಿ: ಮತದಾನದ ವೇಳೆ ಕಾಂಗ್ರೆಸ್ – ಬಿಜೆಪಿ ಮುಖಂಡರ ನಡುವೆ ಮಾರಾಮಾರಿ ನಡೆದ ಘಟನೆ ತಾಲ್ಲೂಕಿನ ಸಂಜೀವರಾಯನ ಕೋಟೆಯಲ್ಲಿ ನಡೆದಿದೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಗ್ರಾಮದ ಬಿಜೆಪಿ ಮುಖಂಡ ಸೋಮನ ಗೌಡ, ಕಾಂಗ್ರೆಸ್‌ನ ಉಮೇಶ ಗೌಡ ನಡುವೆ ಯಾವುದೋ ಕಾರಣಕ್ಕೆ ವಾಗ್ವಾದ ನಡೆದಿದೆ.
ವಾಗ್ವಾದ ಘರ್ಷಣೆಗೆ ತಿರುಗಿದೆ. ಈ ವೇಳೆ ಪರಸ್ಪರ ಬಡಗಿ ಹಿಡಿದು ಜಗಳ ಅಡಿಕೊಂಡಿದ್ದಾರೆ. ಘಟನೆಯಲ್ಲಿ ಇಬ್ಬರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಸ್ಥಳಕ್ಕೆ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರು ಸ್ಥಳಕ್ಕೆ ಭೇಟಿನೀಡಿದರು. ಸದ್ಯ ಪರಿಸ್ಥಿತಿ ಹತೋಟಿಯಲ್ಲಿ ಇದ್ದು ಮತದಾನಕ್ಕೆ ಯಾವುದೇ ಅಡ್ಡಿ ಆಗಿಲ್ಲ.

Previous articleದಾವಣಗೆರೆ ಜಿಲ್ಲೆಯಲ್ಲಿ ಶೇ 20.78 ಮತದಾನ
Next articleಹ್ಯಾಟ್ರಿಕ್ ಗೆಲುವು ನಿಶ್ಚಿತ: ಅಬ್ಬಯ್ಯ ವಿಶ್ವಾಸ