ಧಾರವಾಡ: ಇಲ್ಲಿಯ ಆರ್.ಎನ್. ಶೆಟ್ಟಿ ಕ್ರಿಡಾಂಗಣದ ಬಳಿ ವ್ಯಕ್ತಿಗಳಿಬ್ಬರ ಮಧ್ಯೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಎರಡು ಸುತ್ತು ಗುಂಡು ಹಾರಿಸಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಅಭಿಷೇಕ ಬಡ್ಡಿಮನಿ ಎಂಬಾತನೇ ಎರಡು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಪ್ರಜ್ವಲ, ಗಣೇಶ ಮತ್ತು ದಿನೇಶ ಎಂಬುವವರು ಕಾರಿನಲ್ಲಿ ಬಂದು ಅಭಿಷೇಕನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಹಲ್ಲೆ ಮಾಡಲು ಯತ್ನಿಸಿದರು. ಅದಕ್ಕಾಗಿ ಜೀವ ರಕ್ಷಣೆಗೆ ಗುಂಡು ಹಾರಿಸಿರುವುದಾಗಿ ಅಭಿಷೇಕ ದೂರಿನಲ್ಲಿ ತಿಳಿಸಿದರೆ, ಪ್ರಜ್ವಲ ಮತ್ತು ಸ್ನೇಹಿತರು ಕಾರಿನಲ್ಲಿ ಬರುವಾಗ ಏಕಾಏಕಿ ಡಿಕ್ಕಿ ಹೊಡೆದು ಹಲ್ಲೆ ಮಾಡಲು ಬಂದನು. ಅಲ್ಲದೇ ಗುಂಡು ಹಾರಿಸಿದ್ದಾರೆ ಎಂದು ಪ್ರತಿದೂರು ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದ್ದಾರೆ.