ಎರಡು ದಿನ ವಿವಿಧ ಬಿಜೆಪಿ ನಾಯಕರ ಪ್ರಚಾರ

0
11

ಬಳ್ಳಾರಿ: ಚುನಾವಣಾ ಪ್ರಚಾರಕ್ಕೆ 25 ಮತ್ತು 26ರಂದು ಏಕ ಕಾಲಕ್ಕೆ ರಾಜ್ಯ, ರಾಷ್ಟ್ರ ನಾಯಕರು ಬರಲಿದ್ದಾರೆ ಅದರಂತೆ ನಮ್ಮ 5 ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುವರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮುರಹರ ಗೌಡ ಹೇಳಿದರು.
ನಗರದ ಬಿಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಐದು ಕ್ಷೇತ್ರಗಳ ಪೈಕಿ ಬಳ್ಳಾರಿ ನಗರ ಕೇಂದ್ರ ಕ್ಷೇತ್ರ ವ್ಯಾಪ್ತಿಯಲ್ಲಿ ಇಂಧನ ಸಚಿವ ಕೇಂದ್ರ ಕೃಷ್ಣಪಾಲ್ ಗುಜ್ಜರ್, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಲಕ್ಷ್ಮಣ ಸಿರುಗುಪ್ಪ ಕ್ಷೇತ್ರದಲ್ಲಿ, ಸಂಡೂರು ಕ್ಷೇತ್ರದಲ್ಲಿ ಮೆಹಬೂಬ್ ನಗರದ ಮಾಜಿ ಸಂಸದ ಜಿತೇಂದ್ರನಾಥ್ ರೆಡ್ಡಿ, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಕಂಪ್ಲಿ ಕ್ಷೇತ್ರದಲ್ಲಿ ಮಾಜಿ ಸಂಸದೆ ಜೆ. ಶಾಂತ ಪ್ರಚಾರ ಕಾರ್ಯ ಕೈಗೊಳ್ಳುವರು ಎಂದರು
ಎರಡೂ ದಿನ ಕರಪತ್ರ ಹಿಡಿದು ತಮಗೆ ವಹಿಸಿದ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವರು. ಸಮುದಾಯದ ಮುಖಂಡರ ಜೊತೆ ಸಭೆ ಮಾಡಲಿದ್ದಾರೆ. ನಮ್ಮ ರಾಷ್ಟ್ರ ನಾಯಕರ, ದಾರ್ಶನಿಕರ ಪ್ರತಿಮೆ ಸ್ವಚ್ಛಗೊಳಿಸಿ ನಮನ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದರು.
ಅದಲ್ಲದೆ ವಿವಿಧ 28 ಚುನಾವಣಾ ಘಟಕ ಸಭೆ ನಡೆಸಲಿದ್ದಾರೆ. ಎರಡೂ ದಿನ ಕ್ಷೇತ್ರದಲ್ಲಿಯೇ ಪ್ರಚಾರ ಜವಾಬ್ದಾರಿ ವಹಿಸಿಕೊಂಡ ನಾಯಕರು ಅಲ್ಲಿಯೇ ಮೊಕ್ಕಾಂ ಹೂಡಲಿದ್ದಾರೆ ಎಂದು ಅವರು ತಿಳಿಸಿದರು.
ಪಾಲಿಕೆ ಸದಸ್ಯ ಅಶೋಕ್ ಕುಮಾರ್, ಡಾ.ಬಿಕೆ ಸುಂದರೇಶ್, ರಾಜೀವ್ ತೊಗರಿ, ಅಡವಿ ಸ್ವಾಮಿ ಇದ್ದರು.

Previous articleಏ.25 ಮತ್ತು 26 ರಂದು ವಿಶೇಷ ಮಹಾ ಅಭಿಯಾನ
Next article18 ಲಕ್ಷ ಹಣ, 8 ಕೆಜಿ ಬೆಳ್ಳಿ ನಾಣ್ಯ ವಶಕ್ಕೆ