ಎಚ್ಚರ! ಮಕ್ಕಳಿಗೆ ಬೈಕ್ ನೀಡುವ ಮುನ್ನ

0
13

ಹುಬ್ಬಳ್ಳಿ: ಅಪಾಯಕಾರಿಯಾಗಿ ಬೈಕ್ ಸ್ಟಂಟ್‌ ಮಾಡುತ್ತಿದ್ದ ಐವರು ಯುವಕರನ್ನು ದಕ್ಷಿಣ ಸಂಚಾರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದು 3 ಬೈಕ್ ಗಳನ್ನು ಸೀಜ್ ಮಾಡಿದ ಘಟನೆ ನಡೆದಿದೆ, ಈ ಕರಿತು ಸಾಮಾಜಿಕ ಜಾಲತಾಣದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್‌ ಟ್ವೀಟ್‌ ಮಾಡಿ ನಾಗರಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದೆ. ಅವರು ಟ್ವೀಟ್‌ನಲ್ಲಿ #ಹುಬ್ಬಳ್ಳಿಯ ಹೊರವಲಯದ #Ringroad ನಲ್ಲಿ ಅಪಾಯಕಾರಿಯಾಗಿ ಬೈಕ್ #wheeling ಮಾಡುತ್ತಿದ್ದ ಐವರು ಯುವಕರನ್ನು ದಕ್ಷಿಣ ಸಂಚಾರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದು 3 ಬೈಕ್ ಗಳನ್ನು ಸೀಜ್ ಮಾಡಿ ಯುವಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿರುತ್ತದೆ. ತಡರಾತ್ರಿ ಬೈಕ್ ತೆಗೆದುಕೊಂಡು ಹೋಗುವ ಯುವಕರು ಅಪರಾಧ ಕೃತ್ಯ ಅಥವಾ ಇಂತಹ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವ ಸಾಧ್ಯತೆಗಳು ಹೆಚ್ಚಿದ್ದು ಮಕ್ಕಳಿಗೆ ಬೈಕ್ ನೀಡುವ ಮುನ್ನ ಪಾಲಕರು ಈ ವಿಷಯದಲ್ಲಿ ಮುನ್ನೆಚ್ಚರಿಕೆ ವಹಿಸಿ ಜವಾಬ್ದಾರಿಯಿಂದಿರಲು ಕೋರಲಾಗಿದೆ. ವ್ಹೀಲಿಂಗ್ ಮಾಡುವುದು ಕಂಡುಬಂದಲ್ಲಿ 112 ಗೆ ಕರೆ ಮಾಡಿ ಮಾಹಿತಿ ನೀಡಿ ಎಂದಿದ್ದಾರೆ.

Previous articleಧರ್ಮದ ಹೆಸರಿನಲ್ಲಿ ವೈರತ್ವ ಸಲ್ಲದು
Next articleಕೃಷ್ಣಮಠ ಭೇಟಿ ನೀಡಿದ ವಿತ್ತ ಸಚಿವೆ