ಉಪ್ಪು ತಿಂದವನು ನೀರು ಕುಡಿಬೇಕು ಎಂದವರು ಈಗ ಯಾಕೆ…

0
24

ಚಿಕ್ಕಮಗಳೂರು: ಅವರದ್ದೇ ಬೇರೆ ಫ್ಯಾಮಿಲಿ ನಮ್ಮದೇ ಬೇರೆ ಫ್ಯಾಮಿಲಿ ಎಂದಿದ್ದವರು, ಉಪ್ಪು ತಿಂದವನು ನೀರು ಕುಡಿಬೇಕು ಎಂದವರು ಈಗ ಯಾಕೆ ಉರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಪ್ರಶ್ನಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಪೆನ್ ಡ್ರೈವ್ ಪ್ರಕರಣದ ತನಿಖೆ ನಡೆಯುತ್ತಿದೆ, ನಡೆಯಲಿ ಪೆನ್ ಡ್ರೈವ್ ಕಥಾನಾಯಕ ಹಾಗೂ ಡೈರೆಕ್ಟರ್ ಕುಮಾರಸ್ವಾಮಿ ಕುಮಾರಸ್ವಾಮಿಗೆ ನನ್ನ ರಾಜೀನಾಮೆ ಬೇಕಂತೆ ಕೊಡೋಣಾ. ಇವರು ನನ್ನ ವಿರುದ್ದ ಆರೋಪ ಮಾಡುತ್ತಿದ್ದಾರೆ ಮಾತನಾಡಲಿ ನನ್ನ ಹೆಸರು ಹೇಳದಿದ್ದರೇ ಮಾರ್ಕೆಟ್ ಓಡಲ್ಲ, ಹೆಚ್ ಡಿಕೆ ಏನ್ ಲಾಯರಾ..? ಜಡ್ಜಾ..? ತೀರ್ಪು ಕೊಡೋಕೆ ಹೋಗಿ ಕೋರ್ಟ್ ಅಲ್ಲಿ ವಾದ ಮಾಡಲಿ, ಪೆನ್ ಡ್ರೈವ್ ವಿಚಾರ ಎಲ್ಲವೂ ಕುಮಾರಸ್ವಾಮಿಗೆ ಗೊತ್ತಿದೆ. ಕುಮಾರಣ್ಣನಿಗೆ ನನ್ನ ರಾಜೀನಾಮೆ ಬೇಕಂತೆ. ಒಕ್ಕಲಿಗ ನಾಯಕರ ಪೈಪೋಟಿಯಂತೆ. ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಹೆದರಿಸುವುದೇ ಇವರ ಕೆಲಸ. ಕುಮಾರಸ್ವಾಮಿ ಕಿಂಗ್‌ ಆಫ್‌ ಬ್ಲಾಕ್‌ಮೇಲ್‌. ಚರ್ಚೆ ಮಾಡಲು ಸದನ ಇದೆ. ಎಲ್ಲವನ್ನೂ ತಗೆದುಕೊಂಡು ಬರಲಿ ಚರ್ಚೆ ಮಾಡೋಣ ಎಂದರು.

Previous articleಕಾರ್ಕಳ ಸುಡುಮದ್ದು ಘಟಕದಲ್ಲಿ ಅವಘಡ: ಈರ್ವರು ಮಹಿಳೆಯರಿಗೆ ಗಾಯ
Next articleನಾಳೆ SSLC ಪರೀಕ್ಷೆ ಫಲಿತಾಂಶ ಪ್ರಕಟ