ಉದ್ಯಮಿ ಶಿವಣ್ಣ ಬೆಲ್ಲದ ಇನ್ನಿಲ್ಲ

0
27


ಧಾರವಾಡ: ಖ್ಯಾತ ಉದ್ಯಮಿ, ಬಸವತತ್ವದ ಅನುಯಾಯಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರ‌ ಸಹೋದರ ಶಿವಣ್ಣ ಗುರಪ್ಪ ಬೆಲ್ಲದ(೮೨) ಗುರುವಾರ ನಿಧನರಾದರು.
ಬುಧವಾರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಶಿವಣ್ಣ ಬೆಲ್ಲದ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಅಪಾರ ಬಂಧು ಬಳಗವಿದೆ.
ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಉದ್ದಿಮೆಗಳಲ್ಲಿ ತೊಡಗಿದ್ದ ಶಿವಣ್ಣ ಬೆಲ್ಲದ ಸಾಮಾಜಿಕ ಕಾರ್ಯದಲ್ಲಿಯೂ ಮುಂಚೂಣಿಯಲ್ಲಿದ್ದರು. ಹೊಸಯಲ್ಲಾಪುರ ರುದ್ರಭೂಮಿ ಅಭಿವೃದ್ದಿಗಾಗಿ ಸಾಕಷ್ಟು ಶ್ರಮಿಸಿದ್ದರು.

Previous articleಭಾರತ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿ
Next articleತಾಯಿ ಕಾಲಿನ ಬೂಟ್ ಲೇಸ್ ಕಟ್ಟಿ ಸರಳತೆ ಮೆರೆದ ರಾಹುಲ್ ಗಾಂಧಿ…