ಉದ್ಬವ ಗಣೇಶನ ಸೊಂಡಿಲು ಮೆತ್ತಗಿನ ಅನುಭವ

0
14

ಶಹಬಾದ: ತಾಮೂಕಿನ ಭಂಕೂರ ಗ್ರಾಮದ ಲ್ಲಿ ಇರುವ 12 ಅಡಿ ಎತ್ತರದ ಸ್ವಯಂ ಉದ್ಭವ ಗಣೇಶ ಮೂರ್ತಿಯ ಸೊಂಡಿಲು ಮುಟ್ಟಿದಾಗ ಮೆತ್ತಗೆ ಇರುವ ಅನುಭವ ವಾಗುತ್ತಿರುವದರಿಂದ ನೂರಾರು ಜನ ಭಕ್ತರು ಇಲ್ಲಿಗೆ ಬಂದು ಸೊಂಡಿಲು ಮುಟ್ಟಿ ಮೆತ್ತಗಿನ ಅನುಭವ ಪಡೆದು, ಕೃತಾರ್ಥರಾಗುತ್ತಿದ್ದಾರೆ.
ಬುಧವಾರ ಸಂಜೆಯಿಂದ ಈ ರೀತಿ ಭಕ್ತರಿಗೆ ಆದ ಅನುಭವವನ್ನು ವಿಡಿಯೋ ಮೂಲಕ ವೈರಲ್ ಅಗಿದ್ದು, ಭಕ್ತರ ಕುತೂಹಲಕ್ಕೆ ಮತ್ತಷ್ಟು ಕಾರಣವಾಗಿದೆ.
ಇಲ್ಲಿ ಸ್ವಯಂ ಉದ್ಬವ ಗಣಪತಿಗೆ ಕಳೆದ ಜಲವಾರು ವರ್ಷಗಳಿಂದ ಭಕ್ತರು ತಮ್ಮ ಹರಕೆ ತೀರಿದ ನಂತರ ಮೂರ್ತಿಗೆ ಬಣ್ಣ ಬಳಿಯುತ್ತಾರೆ. ಈ ರೀತಿ ಆಯಿಲ್ ಪೆಂಟ್ ನಿಂದ ಬಣ್ಣ ಹಚ್ಚುವದರಿಂದ ಬಣ್ಣ ದ ಪದರು ದಪ್ಪವಾಗಿದೆ.
ಹೀಗೆ ದಪ್ಪವಾದ ಪದರು ಇಲ್ಲಿ ದೇವಸ್ಥಾನ ಇಲ್ಲದೆ ಮೂರ್ತಿ ಬಯಲಲ್ಲಿ ಇರುವದರಿಂದ ಬಿಸಿಲಿನಿಂದ ಸೊಂಡಿಲ ಬಳಿಯ ಬಣ್ಣದ ಪದರಿನಲ್ಲಿ ಗಾಳಿ ತುಂಬಿ ಉಬ್ಬಿ ನಿಂತಿದೆ. ಈ ಭಾಗಕ್ಕೆ ಮುಟ್ಟಿದಾಗ ಮೆತ್ತನೆಯ ಅನುಭವವಾಗುತ್ತದೆ.
ಈ ಕುರಿತು ಸೂಕ್ತ ತಿಳುವಳಿಕೆ ಇಲ್ಲದ ಜನ,ಸೊಂಡಿಲು ಮೆತ್ತಗಾಗಿದೆ,ಇದು ದೇವರ ಮಹಿಮೆ ಎಂದು ನಂಬುತ್ತ ತಂಡೋಪ ತಂಡವಾಗಿ ದರ್ಶನಕ್ಕೆ ಬರುತ್ತಿದ್ದಾರೆ.

Previous article೫ ಕಡೆ ರಾಹುಲ್ ರ‍್ಯಾಲಿ
Next articleಜೋಶಿ ಎದುರು ಅಹಿಂದ ತಂತ್ರಕ್ಕೆ ಕೈ ಮೊರೆ?