ಬೆಂಗಳೂರು: ಮಾಜಿ ಸಂಸದ ಪ್ರತಾಪ್ ಸಿಂಹ ಸ್ಟೈಲಿಶ್ ಲುಕ್ ಒಮ್ಮಿಂದ ಒಮ್ಮೆಲೆ ಬದಲಾಗಿದ್ದು, ಇದಕ್ಕೆ ಕೇಂದ್ರ ಸಚಿವರೇ ಕಾರಣ ಎಂದು ಪ್ರತಾಪ್ ಸಿಂಹ್ ತಿಳಿಸಿದ್ದಾರೆ
ವಿಭಿನ್ನ ಸ್ಟೈಲಿಶ್ ಗುಂಗುರು ಕೂದಲಿನ ಲುಕ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಇದರ ಮಧ್ಯೆ ತಮ್ಮ ಲುಕ್ ಬದಲಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕೇಂದ್ರ ಸಚಿವರು ಹಾಗೂ ಹಿರಿಯಣ್ಣನಂತೆ ನನ್ನನ್ನು ಸಲುಹುವ ವಿ. ಸೋಮಣ್ಣ ಸಾಹೇಬರ ಗದರಿಕೆಗೆ ಅಂಜಿ ಹೇರ್ ಕಟ್ ಮಾಡಿಸಿದ್ದೇನೆ ಮತ್ತು ನಿಮ್ಮ ಬೈಗುಳದಿಂದಲೂ ತಪ್ಪಿಸಿಕೊಳ್ಳುತಿದ್ದೇನೆ! ಎಂದಿದ್ದಾರೆ.