ಈದ್‌ಮಿಲಾದ್ ಮೆರವಣಿಗೆ ನಂತರ ಗಲಾಟೆ: ನಾಲ್ವರಿಗೆ ತಲ್ವಾರ್‌ನಿಂದ ಹಲ್ಲೆ

0
18

ಬೆಳಗಾವಿ: ಬೆಳಗಾವಿಯಲ್ಲಿ ಈದ್ ಮಿಲಾದ್ ಮೆರವಣಿಗೆಯ ನಂತರ ಕೆಲ ಯುವಕರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದು, ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದಾರೆ.
ಬೆಳಗಾವಿಯ ರುಕ್ಕಿಣಿ ನಗರ ಹಾಗೂ ಉಜ್ವಲ್ ನಗರದ ಯುವಕರ ಮಧ್ಯೆ ಗಲಾಟೆ ಆಗಿದ್ದು, ಮೆರವಣಿಗೆ ಮುಗಿಸಿಕೊಂಡು ವಾಪಸ್ ಬರುವ ವೇಳೆ ಒಬ್ಬರಿಗೊಬ್ಬರು ಸಿಟ್ಟಿನಿಂದ ನೋಡಿದ್ದಕ್ಕೆ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಉಜ್ವಲ ನಗರದ ನಾಲ್ವರಿಗೆ ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಮೊಹಮ್ಮದ್ ಕೈಫ್, ಸಾಹಿಲ್ ಬಂಡಾರೆ, ತನ್ವೀರ್, ಎಂದು ಗುರುತಿಸಲಾಗಿದೆ. ಸದ್ಯ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಈ ಪ್ರಕರಣದ ಸಂಬಂಧ ಮಾಳಮಾರುತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Previous articleರಾಷ್ಟ್ರಧ್ವಜಕ್ಕೆ ಅಪಮಾನ ಪ್ರಕರಣ: ಇಬ್ಬರ ವಿರುದ್ಧ ಪ್ರಕರಣ
Next articleಕುಟುಂಬ ಸಮೇತರಾಗಿ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ನಿಖಿಲ್ ಕುಮಾರಸ್ವಾಮಿ