ಇಳಕಲ್ ಸೀರೆಯಲ್ಲಿ ರಾಷ್ಟ್ರಪತಿ ಮುರ್ಮು

0
22

ಇಳಕಲ್ ಕೈಮಗ್ಗ ಸೀರೆಗೆ, ಬೆಳಗಾವಿಯ ಕಸೂತಿ

ಇಳಕಲ್ : ಸಂಸತ್ತು ಅಧಿವೇಶನ ಆರಂಭವಾದ ಹಿನ್ನೆಲೆಯಲ್ಲಿ ಶುಕ್ರವಾರದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವ ಸಮಯದಲ್ಲಿ ಇಳಕಲ್ ಕೈಮಗ್ಗ ಸೀರೆಯನ್ನು ಉಟ್ಟಿದ್ದಾರೆ.
ಅಪ್ಪಟ ರೇಶ್ಮಿ ಜರಿ ಪರಾಸಪೇಟೆ ಸೀರೆಯನ್ನು ಮಹಾರಾಷ್ಟ್ರ ರಾಜ್ಯದ ಪ್ರಭಾವಿ ರಾಜಕಾರಣಿ ಶರದ್ ಪವಾರ ಇವರ ಸಂಬಂಧಿ ಲಾತೂರದ ರೂಪಾ ಇವರು ನಗರದ ಸೀರೆ ವ್ಯಾಪಾರಿ ವಿಜಯಕುಮಾರ್ ಗುಳೇದ ಇವರಲ್ಲಿ ಖರೀದಿಸಿ ಅದಕ್ಕೆ ಬೆಳಗಾವಿಯಲ್ಲಿ ಕಸೂತಿ ಹಾಕಿಸಿ ಉದಗೀರದಲ್ಲಿ ನಡೆದ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಯ ಸಮಯದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಾಣಿಕೆಯಾಗಿ ನೀಡಿದ್ದರು. ಕಳೆದ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಳಕಲ್ ಸೀರೆ ಉಟ್ಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Previous articleರೋಗಿ ಘನತೆಯಿಂದ ಸಾಯುವ ಹಕ್ಕು ಜಾರಿಗೆ
Next articleಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ಸರ್ಕಾರದಿಂದ ಸುಗ್ರೀವಾಜ್ಞೆ