Home Advertisement
Home ತಾಜಾ ಸುದ್ದಿ ಇಂದೇ ಚುನಾವಣೆ ಘೋಷಣೆ

ಇಂದೇ ಚುನಾವಣೆ ಘೋಷಣೆ

0
96

ಹುಬ್ಬಳ್ಳಿ : ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಇಂದೇ ದಿನಾಂಕ ಘೋಷಣೆಯಾಗಲಿದೆ.
ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ಬೆಳಿಗ್ಗೆ 11.30 ಕ್ಕೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ಚುನಾವಣೆ ಘೋಷಣೆ ಮಾಡಲಿದ್ದಾರೆ.
ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.
ಚುನಾವಣಾ ಆಯೋಗದ ಆಯುಕ್ತರು ಸುದ್ದಿಗೋಷ್ಠಿ ನಡೆಸಲಿದ್ದು, ನಾಮಪತ್ರ ಸಲ್ಲಿಕೆ ಯಾವಾಗ, ನಾಮಪತ್ರ ಹಿಂದಕ್ಕೆ ಪಡೆಯುವ, ನಾಮಪತ್ರ ಪರಿಶೀಲನೆ , ಮತದಾನ ದಿನಾಂಕಗಳನ್ನು ಘೋಷಣೆ ಮಾಡಲಿದ್ದಾರೆ.
ಕಳೆದ ಬಾರಿ ವಿಧಾನ ಸಭಾ ಚುನಾವಣೆ ಮೇ 12 ರಂದು ಮತದಾನ ನಡೆದು ಮೇ 15 ಕ್ಕೆ ಫಲಿತಾಂಶ ಪ್ರಕಟವಾಗಿತ್ತು. ಬಹುತೇಕ ಅದೇ ಮಾದರಿಯಲ್ಲಿ ಆಯೋಗ ಚುನಾವಣೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Previous articleಒಳಮೀಸಲಾತಿ ವರದಿ ಜಾರಿ ಬೇಡ: ಸಿಎಂಗೆ ಬಂಜಾರ ಸಮಾಜ ಮನವಿ
Next articleಚುನಾವಣಾ ವೇಳಾಪಟ್ಟಿ: ಸುದ್ದಿಗೋಷ್ಠಿ ಆರಂಭ