ಇಂದಿನಿಂದ ಹಾಸನಾಂಬಾ ದರ್ಶನೋತ್ಸವ

0
35

ಹಾಸನ: ನಗರದ ಅಧಿದೇವತೆ ಹಾಗೂ ಶಕ್ತಿದೇವತೆ ಹಾಸನಾಂಬೆಯ ದೇವಾಲಯ ಬಾಗಿಲನ್ನು ಸಾಂಪ್ರದಾಯಿಕ ಪೂಜೆ ನೆರೆವೇರಿಸಿ ಇಂದು ತೆರೆಯಲಾಯಿತು.
ಹಾಸನದ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಸ್ಥಾನದಲ್ಲಿ ದೇವಿಯ ದರ್ಶನ ಶುರುವಾಗಿದ್ದು. ಗರ್ಭಗುಡಿಯ ಬಾಗಿಲನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ, ಶಾಸಕರಾದ ಎಚ್‌.ಪಿ.ಸ್ವರೂಪ್‌ ಪ್ರಕಾಶ್‌, ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸತ್ಯಭಾಮಾ, ಎಸ್‌‍ಪಿ ಮಹಮದ್‌ ಸುಜೇತ ಸೇರಿದಂತೆ ಸೇರಿದಂತೆ ಜಿಲ್ಲಾಳಿತದ ಅಧಿಕಾರಿಗಳು, ದೇವಾಲದಯ ಆಡಳಿತ ಮಂಡಳಿ, ಮುಖಂಡರುಗಳ ಸಮುಖದಲ್ಲಿ ದೇವಾಲದಯ ಗರ್ಭಗುಡಿ ತೆರೆಯಲಾಯಿತು. ಇಂದಿನಿಂದ 11 ದಿನಗಳ ಕಾಲ ತೆರೆದು 9 ದಿನಗಳ ಕಾಲ ಭಕ್ತರಿಗೆ ದರ್ಶನ ನೀಡಲು ಸಿದ್ದತೆ ಮಾಡಲಾಗಿದೆ. ಕಳೆದ ವರ್ಷ ಗರ್ಭಗುಡಿ ಮುಚ್ಚುವ ವೇಳೆ ಹಚ್ಚಲಾಗಿದ್ದ ದೀಪ ಹಾಗೂ ದೇವರ ಮುಂದೆ ಇಟ್ಟಿದ್ದ ಹೂವು, ನೈವೇದ್ಯ ಹಾಗೆಯೇ ಇತ್ತು.ಇಂದಿನಿಂದ ನ.3ರವರೆಗೆ ಹಾಸನಾಂಬೆಯ ಜಾತ್ರಾ ಮಹೋತ್ಸವ ನಡೆಯಲಿದ್ದು, ಇಂದು ಮತ್ತು ನ.3 ರಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ.

Previous articleಭರತ್ ಬೊಮ್ಮಾಯಿ‌ ನಾಮಪತ್ರ ಸಲ್ಲಿಕೆ
Next articleಅನ್ನಪೂರ್ಣ ತುಕಾರಾಂ ನಾಮಪತ್ರ ಸಲ್ಲಿಕೆ