ಆ್ಯಕ್ಸೆಲ್ ಕಟ್ಟಾಗಿ ಪಲ್ಟಿ ಹೊಡೆದ ಬಸ್: ಪ್ರಯಾಣಿಕರು ಕಿಮ್ಸ್‌ಗೆ ದಾಖಲು

0
26

ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್ಸಿನ ಆ್ಯಕ್ಸೆಲ್ ಕಟ್ಟಾಗಿ ಬಸ್‌ ಪಲ್ಟಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 15ಕ್ಕೂ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಸವದತ್ತಿಗೆ ಹೊರಟಿದ್ದ ಕೆಎಸ್‌ಆರ್‌ಟಿಎಸ್‌ ಬಸ್ಸಿನ ಆ್ಯಕ್ಸೆಲ್ ಕಟ್ಟಾಗಿದ್ದರಿಂದ ಬಸ್‌ ನಿಯಂತ್ರಣ ಕಳೆದುಕೊಂಡಿತು ಆಗ ಬಸ್ ಚಾಲಕ ನಿಯಂತ್ರಿಸಲು ಎಷ್ಟೇ ಪ್ರಯತ್ನ ಮಾಡಿದರು ಸಹ ಸಾಧ್ಯವಾಗದೇ ಪಲ್ಟಿ ಹೊಡೆದಿದೆ. ಪಲ್ಟಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 15ಕ್ಕೂ ಅಧಿಕ ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಗಾಯಗೊಂಡ ಪ್ರಯಾಣಿಕರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಗೃಹಲಕ್ಷ್ಮಿಯ ಕಟಾಕಟ್ ಈಗ ಕಟ್ ಕಟ್ ಆಗಿದೆ…
Next article28 ವಿವಿಗಳ ನಕಲಿ ಅಂಕಪಟ್ಟಿ ತಯಾರಿಕಾ ಜಾಲ: ಕಿಂಗ್​​ಪಿನ್ ಬಂಧನ