ಆಸ್ಪತ್ರೆಗಳಲ್ಲಿ ಸೇಫ್ಟಿ ಆಡಿಟ್ ಆಗಬೇಕು

0
17

ಬೆಂಗಳೂರು: ಆಸ್ಪತ್ರೆಗಳಲ್ಲೂ ಸೇಫ್ಟಿ ಆಡಿಟ್ ಆಗಬೇಕು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಆದ ಅಗ್ನಿ ಅವಘಡ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಸುರಕ್ಷತಾ ಆಡಿಟ್ ಕಡ್ಡಾಯವಾಗಿ ಮಾಡಬೇಕು. ಶಾರ್ಟ್ ಸರ್ಕ್ಯೂಟ್, ನಿರ್ವಹಣೆಯ ಕೊರತೆ, ಇಂಧನ ಸೋರಿಕೆ, ಅಗ್ನಿ ಆಕಸ್ಮಿಕ, ಸಿಬ್ಬಂದಿ ಅಜಾಗರೂಕತೆ ಆಗದಂತೆ ಸೂಕ್ತ ಮಾರ್ಗದರ್ಶನ, ತರಬೇತಿ ಹಾಗೂ ಒಂದು ವೇಳೆ ಅವಘಡ ಆದಲ್ಲಿ ಹೇಗೆ ಪ್ರಾಣಾಪಾಯದಿಂದ ರೋಗಿಗಳು, ಸಿಬ್ಬಂದಿ ಹಾಗೂ ವೈದ್ಯರು ಪಾರಾಗಲು ಬೇಕಾದ ಸುರಕ್ಷತಾ ಉಪಕರಣಗಳ ಉಪಯೋಗದ ಬಗ್ಗೆ ಸೂಕ್ತ ತರಬೇತಿಯನ್ನು ನೀಡಬೇಕು. ಖಾಸಗಿ ಆಸ್ಪತ್ರೆಗಳಲ್ಲೂ ಸೇಫ್ಟಿ ಆಡಿಟ್ ಆಗಬೇಕು. ಆಸ್ಪತ್ರೆಗಳ ಮುಂದೆ ವಾಹನ ದಟ್ಟಣೆ ಆಗದಂತೆ ನೋಡಿಕೊಳ್ಳಬೇಕಾದದ್ದು ಸರ್ಕಾರದ ಕರ್ತವ್ಯ ಎಂದಿದ್ದಾರೆ.

Previous articleಹುತಾತ್ಮ ಸೈನಿಕನ ದುರದೃಷ್ಟ ಪತ್ನಿ
Next articleಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ: ಮತ್ತೊಂದು ಅಮಾನವೀಯ ಘಟನೆ