ಆಭರಣ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳ ದಾಳಿ

0
31

ಮಂಗಳೂರು: ಬೆಳ್ಳಂಬೆಳಗ್ಗೆ ಕರಾವಳಿ ಭಾಗದ ಚಿನ್ನದಂಗಡಿ ಮಾಲೀಕರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್‌ ನೀಡಿದ್ದು, ಉಡುಪಿ, ಕಾರ್ಕಳ, ಕುಂದಾಪುರ, ಪಡುಬಿದ್ರಿ, ಬ್ರಹ್ಮಾವರ, ಪುತ್ತೂರು ಸೇರಿದಂತೆ ಹಲವೆಡೆ ಚಿನ್ನದ ಅಂಗಡಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕದ್ರಿ ಆಭರಣ ಸೇರಿದಂತೆ ವಿವಿಧ ಚಿನ್ನದಂಗಡಿಗಳ ಮೇಲೆ ಐಟಿ ದಾಳಿಯಾಗಿದೆ. ಮಂಗಳೂರಿನ ಕದ್ರಿಯ ಬಳಿಯ ಶಿವಭಾಗ್‌ನ ಆಭರಣ ಜ್ಯುವೆಲ್ಲರಿಯ ಮೇಲೆ ಐಟಿ ಅಧಿಕಾರಿಗಳು ನಡೆಸಿದ್ದು, ಬೆಳಗ್ಗಿನಿಂದ ದಾಖಲೆಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ಐದಾರು ಜನ ಐಟಿ ಅಧಿಕಾರಿಗಳ ತಂಡದಿಂದ ಜ್ಯುವೆಲ್ಲರಿಯಲ್ಲಿ ಪರಿಶೀಲನೆ ನಡೆಯುತ್ತಿದ್ದು, ಬಿಲ್ಲಿಂಗ್ ವಿವರ, ಚಿನ್ನದ ಬೇರೆ ಬೇರೆ ದಾಖಲೆಗಳನ್ನು ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Previous articleಮಹಾರಾಷ್ಟ್ರಕ್ಕೆ ‘ಎನ್ ಡಬ್ಲ್ಯುಕೆಆರ್ ಟಿಸಿ’ ಬಸ್ ಸಂಚಾರ ತಾತ್ಕಾಲಿಕ ಸ್ಥಗಿತ
Next articleಎತ್ತ ಸಾಗುತ್ತಿದೆ “ಸಮೃದ್ಧ ಕರ್ನಾಟಕ”? ಸಿಎಂಗೆ ಪ್ರಲ್ಹಾದ ಜೋಶಿ ಪ್ರಶ್ನೆ