ಆಣೆಕಟ್ಟು ಇತಿಹಾಸದಲ್ಲೇ ಇದೇ ಮೊದಲು ದುರಂತ

0
67


ಬಳ್ಳಾರಿ: ‘ತುಂಗಭದ್ರಾ ಅಣೆಕಟ್ಟೆಯ 19ನೇ ಸಂಖ್ಯೆಯ ಕ್ರಸ್ಟ್‌ಗೇಟ್‌ನ ಚೈನ್‌ಲಿಂಕ್ ಬೆಸುಗೆ (ವೆಲ್ಡಿಂಗ್) ಬಿಟ್ಟಿದ್ದೇ ಗೇಟ್ ಸಂಪೂರ್ಣ ಕುಸಿಯಲು ಕಾರಣ, ಅಣೆಕಟ್ಟೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ದುರಂತ ಸಂಭವಿಸಿದೆ’ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆ‌ರ್.ಕೆ.ರೆಡ್ಡಿ ಹೇಳಿದರು.

ಟಿ.ಬಿ.ಡ್ಯಾಂ ಅತಿಥಿಗೃಹ ‘ವೈಕುಂಠ’ದಲ್ಲಿ ಭಾನುವಾರ ಬೆಳಿಗ್ಗೆ ಹಿರಿಯ ಅಧಿಕಾರಿಗಳು, ಎಂಜಿನಿಯರ್‌ಗಳ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ‘ ಜತೆಗೆ ಮಾತನಾಡಿದ ಅವರು, ಬದಲಿ ಗೇಟ್ ಅಳವಡಿಸಲು ತಕ್ಷಣದಿಂದಲೇ ಸಿದ್ಧತೆ ನಡೆದಿದೆ. ಮಳೆ ಕಡಿಮೆಯಾಗಿರುವ ಕಾರಣ ಮೂರ್ನಾಲ್ಕು ದಿನಗಳಲ್ಲಿ ನೀರು ಖಾಲಿಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದರು.
‘ಸಾಮಾನ್ಯವಾಗಿ ಪ್ರತಿ ವರ್ಷವೂ ಗೇಟ್‌ಗಳ ಸುರಕ್ಷತೆಯ ಬಗ್ಗೆಪರಿಶೀಲನೆ ನಡೆಸುತ್ತಲೇ ಇರುತ್ತೇವೆ. ಈ ಬಾರಿ ಸಹ ಅಂತಹಎಲ್ಲಾ ಪರೀಕ್ಷೆಗಳೂ ನಡೆದಿವೆ. ಆದರೆ 19ನೇ ಗೇಟ್‌ನಲ್ಲಿ ವೆಲ್ಡಿಂಗ್‌ ಬಿಟ್ಟ ಕಾರಣ ಚೈನ್‌ಲಿಂಕ್‌ ತುಂಡಾಯಿತು. 70 ವರ್ಷಗಳ ಹಿಂದೆ ಅಳವಡಿಸಿದ ಚೈನ್‌ ಲಿಂಕ್ ಇದು. ಹೀಗಿದ್ದರೂ ಈ ವೆಲ್ಡಿಂಗ್ ಬಿಡಲು ಕಾರಣ ಏನು ಎಂಬುದರ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

48 ಟನ್‌ ಗೇಟ್:

ಸಂಪೂರ್ಣ ಹೊಸ ಕ್ರಸ್ಟ್‌ಗೇಟ್ ಅನ್ನೇ ಅಳವಡಿಸಬೇಕಿದೆ. 60 ಅಡಿ ಎತ್ತರ ಮತ್ತು 20 ಅಡಿ ಅಗಲದ ಗೇಟ್ ಇದಾಗಿರುತ್ತದೆ. ತಲಾ 12 ಅಡಿ ಅಗಲದ 5 ಬೃಹತ್ ಕಬ್ಬಿಣದ ಹಲಗೆಗಳನ್ನು ಜೋಡಿಸಿ ಈ ಗೇಟ್ ಸಿದ್ಧಪಡಿಸಲಾಗುತ್ತದೆ. ಸ್ಥಳೀಯವಾಗಿಯೇ ಅದನ್ನು ನಿರ್ಮಿಸುಲಾಗುತ್ತಿದೆ. ನೀರು 20 ಅಡಿಯಷ್ಟು ಇಳಿಕೆಯಾದ ತಕ್ಷಣ ಗೇಟ್ ಅಳವಡಿಸಲಾಗುವುದು’ ಎಂದು ರೆಡ್ಡಿ ಮಾಹಿತಿ ನೀಡಿದರು.

Previous articleಬಸ್-ಆಟೋ ರೀಕ್ಷಾ ನಡುವಣ ಡಿಕ್ಕಿ
Next articleರೈತರ ತಲೆಮೇಲೆ ಬಂಡೆ ಹಾಕಿದ ಸರ್ಕಾರ: ಆಚಾರ್