ಬೆಳಗಾವಿ: ದಕ್ಷಿಣ ಭಾರತದ ಏಕೈ ಅಶ್ವತ್ಥಾಮ ಮಂದಿರಕ್ಕೆ ತಿಂಗಳ ಹಿಂದೆ ಕಲ್ಲೆಸೆದಿದ್ದ ಅದೇ ಅನ್ಯಕೋಮಿನ ಯುವಕ ಇದೀಗ ಮತ್ತೊಮ್ಮೆ ಕಲ್ಲೆಸೆದಿರುವ ಘಟನೆ ಇಲ್ಲಿನ ಪಾಂಗುಳ ಗಲ್ಲಿಯಲ್ಲಿ ನಡೆದಿದೆ.
ಕೆಲದಿನಗಳ ಹಿಂದೆಯಷ್ಟೇ ಇದೇ ಯುವಕ ದೇವಸ್ಥಾನಕ್ಕೆ ಕಲ್ಲೆಸೆದು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದ. ಆರೋಪಿಯನ್ನು ಉಜ್ವಲ ನಗರದ ನಿವಾಸಿ ಯಾಸೀರ ನರಸದಿ (19) ಎಂದು ಗುರುತಿಸಿದ್ದು, ಈತ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಈ ಹಿಂದೆ ಬಿಟ್ಟು ಕಳುಹಿಸಿದ್ದರು. ಆದರೆ ಇದೀಗ ಆತ ಮತ್ತೆ ತನ್ನ ಚಾಳಿ ಮುಂದುವರೆಸಿದ್ದಾನೆ.
ನಿನ್ನೆ ರಾತ್ರಿ ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಬಂದು ಹಿಂದೂ ಯುವಕರು ಜಮಾವಣೆಗೊಂಡಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಈತನ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಸ್ಥಾನದ ಪಕ್ಕದಲ್ಲಿ ಕೆಎಸ್‌ಆರ್‌ಪಿ ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿದೆ. ಓರ್ವ ಪಿಐ, ಪಿಎಸ್‌ಐ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ.