ಶಬರಿಮಲೆ ಯಾತ್ರಾರ್ಥಿಗಳು ಇನ್ನು ವಿಮಾನದಲ್ಲಿ ಇರುಮುಡಿ ಕೊಂಡೊಯ್ಯಲು ಅನುಮತಿ
ಬೆಂಗಳೂರು: ಕೇಂದ್ರ ಸರ್ಕಾರ ಅಯ್ಯಪ್ಪ ಭಕ್ತರಿಗೆ ಸಂತಸದ ಸುದ್ದಿಯನ್ನು ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಹಿಂದೂಗಳ ಪವಿತ್ರ ಸ್ಥಳ ಶಬರಿಮಲೆ ಅಯ್ಯಪನ್ನ ದರುಶನಕ್ಕೆ ತೆರಳುವ ಮಾಲಾಧಾರಿಗಾಳು ವಿಮಾನದಲ್ಲಿ “ಇರುಮುಡಿ” ಕೊಂಡೊಯ್ಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅವಕಾಶ ಕಲ್ಪಿಸಿದೆ. ಕಠಿಣ ವೃತದ ಮೂಲಕ ಅಯ್ಯಪ್ಪನ ದರ್ಶನಕ್ಕಾಗಿ ತೆರಳುವ ಮಾಲಾಧಾರಿ ಸ್ವಾಮಿಗಳ ಬಹುಬೇಡಿಕೆ ಇಂದು ಈಡೇರಿದೆ ಇದಕ್ಕಾಗಿ ಧನ್ಯವಾದ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.