Home Advertisement
Home ಅಪರಾಧ ಅಪ್ರಾಪ್ತ ಬಾಲಕನಿಂದ ಲೈಂಗಿಕ ದೌರ್ಜನ್ಯ

ಅಪ್ರಾಪ್ತ ಬಾಲಕನಿಂದ ಲೈಂಗಿಕ ದೌರ್ಜನ್ಯ

0
98
CHILD

ಮಂಗಳೂರು: ಅಪ್ರಾಪ್ತ ಬಾಲಕನೊಬ್ಬ ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಜಿಬಂಟ್ವಾಳದಲ್ಲಿ ನಡೆದಿದೆ.
ಸಂತ್ರಸ್ತ ಬಾಲಕಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ನೀಡಿದ ದೂರಿನಂತೆ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.
ಹತ್ತನೇ ತರಗತಿಯಲ್ಲಿ ಓದುತ್ತಿರುವ ಸಂತ್ರಸ್ತೆ ತನ್ನ ತಂದೆ ತಾಯಿ ಅಕ್ಕಳೊಂದಿಗೆ ಬಂಟ್ವಾಳದಲ್ಲಿ ವಾಸವಾಗಿದ್ದಳು. ಈ ಬಾಲಕಿಗೆ ಇನ್ಸ್ಟಾಗ್ರಾಂನಲ್ಲಿ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನಿಗೆ ಪರಿಚಯವಾಗಿದೆ. ಪರಿಚಯ ಬಳಿಕ ಪ್ರಣಯಕ್ಕೆ ತಿರುಗಿದೆ. ಬಳಿಕ ಬಾಲಕ ಆಗಾಗ ಸಂತ್ರಸ್ತೆಯ ಮನೆಗೆ ಭೇಟಿ ಕೊಡುತ್ತಿದ್ದನು.
ಒಂದು ದಿನ ಬಾಲಕ ಸಂತ್ರಸ್ತೆಗೆ ಕರೆ ಮಾಡಿ ರಾತ್ರಿ ಸಂತ್ರಸ್ತೆಯ ಮನೆಗೆ ಬಂದಿದ್ದು, ಬಳಿಕ ಆಕೆ ಆತನ ಜೊತೆ ಸ್ಕೂಟರ್‌ನಲ್ಲಿ ತೆರಳಿದ್ದಾಳೆ. ಅಂದು ಬಾಲಕ ಸಂತ್ರಸ್ತೆಗೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಆಕೆಯನ್ನು ಮನೆಗೆ ಬಿಟ್ಟು ಹೋಗಿದ್ದಾನೆ. ಈ ಬಗ್ಗೆ ಸಂತ್ರಸ್ತ ಬಾಲಕಿಯ ದೂರಿನಂತೆ, ಬಾಲಕನನ್ನು ಬಾಲನ್ಯಾಯ ಮಂಡಳಿಯ ಎದುರು ಹಾಜರುಪಡಿಸಿ, ರಿಮಾಂಡ್ ಹೋಂಗೆ ಆದೇಶಿಸಲಾಗಿದೆ.

Previous articleಗುಜರಾತ್ ಸೋಲಿಗೆ ಮೋದಿ ಅಲೆಯಲ್ಲ, ಆಮ್ ಆದ್ಮಿ ಕಾರಣ: ಸತೀಶ
Next articleಕುಷ್ಟಗಿಯಲ್ಲಿ ಹಾಡಹಗಲೇ ಮನೆ ಕಳ್ಳತನ