ಅಪರಿಚಿತ ವಾಹನ ಡಿಕ್ಕಿ: ಚಿರತೆ ಧಾರುಣವಾಗಿ ಸಾವು!

0
21
ಚಿರತೆ ಸಾವು

ಕಾರವಾರ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಚಿರತೆಯೊಂದು ಧಾರುಣವಾಗಿ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕುಮಟಾ ತಾಲೂಕಿನ ಬರ್ಗಿ ಗ್ರಾಮದ ಸಮೀಪದ ಬೆಟ್ಕುಳಿ ಬಳಿ ನಡೆದಿದೆ.
ಸುಮಾರು ಎಂಟು ವರ್ಷದ ಗಂಡು ಚಿರತೆ ಮೃತಪಟ್ಟಿದೆ. ಬೆಟ್ಕುಳಿ ಬಳಿ ಕಾಡಂಚಿನಿಂದ ರಾಷ್ಟ್ರೀಯ ಹೆದ್ದಾರಿ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದ್ದು ಚಿರತೆ ರಸ್ತೆಯಂಚಿಗೆ ಬಿದ್ದಿತ್ತು. ಈ ಬಗ್ಗೆ ತಿಳಿದ ವಾಹನ ಸವಾರರು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅದರಂತೆ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೃತ ಚಿರತೆ ನೋಡಲು ಜನರು ಮುಗಿಬಿದ್ದಿದ್ದು ಮೃತ ಚಿರತೆ ಎದುರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕುಮಟಾಕ್ಕೆ ಸಾಗಾಟ ಮಾಡಲಾಗಿದೆ.

Previous articleರ‍್ಯಾಪಿಡ್ ರಸ್ತೆ ವಿಮರ್ಶೆ ವರದಿಗೆ ₹23 ಲಕ್ಷ
Next articleಕಸಾಯಿ ಖಾನೆ ಮೇಲೆ ದಾಳಿ