ಅನುಮಾನ ಆಸ್ಪದ ಬ್ಯಾಕ್ ಪ್ಯಾಕ್ ಪತ್ತೆ

0
27

ಅನುಮಾನಸ್ಪದ ಬ್ಯಾಕ್ ಪ್ಯಾಕ್ ಬ್ಯಾಗ್ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ, ಆತಂಕ ಮೂಡಿಸಿದೆ.

ಕಲಬುರಗಿ : ಜಿಲ್ಲಾಧಿಕಾರಿ ಆವರಣದ ಪಕ್ಕದ ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಕ್ ಪ್ಯಾಕ್ ಬ್ಯಾಗ್ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ, ಆತಂಕ ಮೂಡಿಸಿದೆ.

ಎಸ್ ವಿ ಪಿ ಸರ್ಕಲ್ ನಿಂದ ಮಾರ್ಕೆಟ್ ಕಡೆಗೆ ಬರುವ ರಸ್ತೆಯಲ್ಲಿ ಇರುವ ಬಸ್ ಸ್ಟ್ಯಾಂಡ್ ನಲ್ಲಿ ವಾರಸುದಾರರಿಲ್ಲದ ಒಂದು ಬ್ಯಾಕ್ ಪ್ಯಾಕ್ ಬ್ಯಾಗ್ ದೊರತಿದೆ. ಅದನ್ನು ಗಮನಿಸಿದ ಸಾರ್ವಜನಿಕರು ಟ್ರಾಫಿಕ್ ಎ ಎಸ್ಐ ಸಿಕಂದರ್ ಖಾನ್ ರವರ ಗಮನಕ್ಕೆ ತಂದಿದ್ದು, ನಿಯಂತ್ರಣ ಕೊಠಡಿಗೆ ವಿಷಯವನ್ನು ತಿಳಿಸಿರುತ್ತಾರೆ‌. ಎ ಸಿಪಿ ಸಿ ಸರ್ದಾರ್ ರವರ ನೇತೃತ್ವದಲ್ಲಿ ತಕ್ಷಣ ಆಂಟಿ ಸಬೌಟೇಜ್ ಚೆಕ್ ಟೀಮ್ ದೌಡಾಯಿಸಿ ಪರಿಶೀಲಿಸಿದೆ. ಯಾವುದೇ ಸಂಶಯಾಸ್ಪದ ವಸ್ತುಗಳು ಕಂಡುಬರದ ಹಿನ್ನೆಲೆಯಲ್ಲಿ, ಬ್ಯಾಗನ್ನು ಸ್ಟೇಷನ್ ಬಜಾರ್ ಠಾಣೆಯ ಪಿ ಎಸ್ ಐ ಹಣಮಂತರಾಯ ರವರ ಸೂಪರ್ದಿಗೆ ಒಪ್ಪಿಸಿದೆ.
ಈ ಬ್ಯಾಗನಲ್ಲಿ ಮಾಕ್ಸ್ ಕಾರ್ಡ್ ಗಳು ಹಾಗೂ ಆಧಾರ್ ಕಾರ್ಡ್, ವೋಟರ್ ಐಡಿಗಳು ದೊರಕಿದ್ದು, ಅದನ್ನು ಸಂಬಂಧಪಟ್ಟ ಜೀವರ್ಗಿ ತಾಲೂಕಿನ ಮಧ್ಯಮ ವಯಸ್ಸಿನ ವ್ಯಕ್ತಿಗೆ ಮುಟ್ಟಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Previous articleಅಗ್ನಿ ಅವಘಡ ಕಣಕಿ ಮೇವಿನ ಬಣವಿ ಭಸ್ಮ
Next articleಲೋಕಸಭಾ ಚುನಾವಣೆಯಲ್ಲಿ ದೊಡ್ಡ ಸೊನ್ನೆ ಸುತ್ತುವುದು ಮಾತ್ರ ಗ್ಯಾರೆಂಟಿ