ಉಡುಪಿಯ ಶಿವಳ್ಳಿ ಎಂಬ ಗ್ರಾಮ ಸುಲ್ತಾನಪುರ ಗ್ರಾಮ ಎಂದು ದಿಶಾಂಕ ಆ್ಯಪ್ ನಲ್ಲಿ ತೋರಿಸುತ್ತಿದೆ. ಇದರಿಂದ ಆತಂಕದ ವಾತಾವರಣ ಮನೆ ಮಾಡಿದೆ. ಐತಿಹಾಸಿಕ ಸ್ಮಾರಕಗಳು ಸಹ ವಕ್ಫ್ ಎಂದಾಗಿದೆ.
ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಅವಧಿಯ ಅಹೋರಾತ್ರಿ ಧರಣಿಯಲ್ಲಿ ಭಾಗಿಯಾಗುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ದೇವಾಲಯಗಳು, ಮಠಗಳು, ರೈತ ಜಮೀನು ಒಂದು ಉಳಿದಿಲ್ಲ. ಇದರ ವಿರುದ್ಧ ವಿಜಯಪುರದಿಂದಲೇ ನಾನು ವಕ್ಫ್ ಹೋರಾಟ ಪ್ರಾರಂಭಿಸುತ್ತಿದ್ದೇನೆ. ಇಂದು ರೈತರೊಂದಿಗೆ ಹೋರಾಟದಲ್ಲಿ ಭಾಗಿಯಾಗುತ್ತೇನೆ. ಉಡುಪಿಯ ಶಿವಳ್ಳಿ ಎಂಬ ಗ್ರಾಮ ಸುಲ್ತಾನಪುರ ಗ್ರಾಮ ಎಂದು ದಿಶಾಂಕ ಆ್ಯಪ್ ನಲ್ಲಿ ತೋರಿಸುತ್ತಿದೆ. ಇದರಿಂದ ಆತಂಕದ ವಾತಾವರಣ ಮನೆ ಮಾಡಿದೆ. ಐತಿಹಾಸಿಕ ಸ್ಮಾರಕಗಳು ಸಹ ವಕ್ಫ್ ಎಂದಾಗಿದೆ. ವಿಜಯಪುರದ ಡಿಸಿ, ಎಸ್ಪಿ ಕಚೇರಿ, ಜಿಲ್ಲಾಸ್ಪತ್ರೆ ಹಾಗೂ ಇತರೆ ದೇವಸ್ಥಾನಗಳು ವಕ್ಫ್ ಎಂದಾಗಿದೆ. ದಾನದ ಮೂಲಕ ವಕ್ಫ್‌ಗೆ ಬರಬೇಕು. ಆದರೆ, ಇವೆಲ್ಲಾ ಹೇಗೆ ವಕ್ಫ್ ಎಂದಾದವು, ಸಿದ್ದರಾಮಯ್ಯ ಸರ್ಕಾರ ಏನು ಮಾಡುವುದಕ್ಕೆ ಹೊರಟಿದೆಯೋ ಗೊತ್ತಿಲ್ಲ, 1974ರ ಗೆಜೆಟ್ ನೊಟಿಫಿಕೇಷನ್ ಸಂಪೂರ್ಣ ರದ್ದಾಗಬೇಕು. ಇದು ರದ್ದಾಗುವವರೆಗೂ ಹೋರಾಟ ಮಾಡುತ್ತೇವೆ ಎಂದರು.


























