ಚಿಕ್ಕಮಗಳೂರು: ಅಜ್ಜ-ಅಜ್ಜಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಸೈಕೊ ಕ್ಯಾಬ್ ಡ್ರೈವರ್‌ನನ್ನು ಘಟನೆ ನಡೆದ ೪೮ ಗಂಟೆಯೊಳಗೆ ಮಲ್ಲಂದೂರು ಪೊಲೀಸರು ಬಂಧಿಸಿದ್ದಾರೆ. ಅಜ್ಜ-ಅಜ್ಜಿ ಇಬ್ಬರನ್ನೂ ಕೊಲೆ ಮಾಡಿದ್ದಕ್ಕೆ ಕಾರಣವೇನು ಎಂಬ ಕಥೆಯನ್ನು ಆರೋಪಿ ನಿಶಾಂತ್ ಪೊಲೀಸರೆದುರು ಕೊನೆಗೂ ಬಾಯಿಬಿಟ್ಟಿದ್ದಾನೆ. ಮಾರಕ ಕಾಯಿಲೆಗೆ ತುತ್ತಾಗಿದ್ದೇನೆ ಹಣ ಕೊಡಿ ಎಂದು ಕೇಳಿದೆ, ಅವರು ಕೊಡಲಿಲ್ಲ ಅದಕ್ಕೆ ಕೊಲೆ ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ರಾತ್ರೋರಾತ್ರಿ ಹತ್ಯೆ ಮಾಡಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಪಾಪಿಯನ್ನು ಮಲ್ಲಂದೂರು ಪಿಎಸ್‌ಐ ಗುರುಸಜ್ಜನ್ ನೇತೃತ್ವದ ತಂಡ ಬಂಧಿಸಿ ಕರೆ ತಂದು ವಿಚಾರಣೆ ಮಾಡಿದಾಗ ಕೊಲೆಯ ಕಾರಣ ತಿಳಿಸಿದ್ದಾನೆ.
ಕೃತ್ಯ ನಡೆದ ನಂತರ ಪರಾರಿಯಾಗಲು ಬಳಸಿದ ಟಾರ್ಕ್ ಸ್ಕೂಟಿಯನ್ನು ವಶಕ್ಕೆ ಪಡೆದುಕೊಂಡು, ಆರೋಪಿಯು ಬಸಪ್ಪ ಹಾಗೂ ಲಲಿತಮ್ಮ ಅವರನ್ನು ಕೊಲೆ ಮಾಡಲು ಬಳಸಿದ ವಸ್ತುಗಳನ್ನು ಅಮಾನತುಪಡಿಸಿಕೊಂಡಿರುತ್ತಾರೆ.