ಅಕ್ರಮ ಮರಳು ಸಾಗಾಣಿಕೆ, ೪ ವಾಹನಗಳ ಜಪ್ತಿ

0
22

ಹುಬ್ಬಳ್ಳಿ: ಗಬ್ಬೂರ ಕ್ರಾಸ್‌ನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನಧಿಕೃತ ಮರಳು ಸಾಗಾಣಿಕೆ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿದವು.
ಕಾರ್ಯಾಚರಣೆ ವೇಳೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ತಪಾಸಣೆ ಮಾಡಿ, ಪರವಾನಗಿ ಇಲ್ಲದ ನಾಲ್ಕು ವಾಹನಗಳನ್ನು ಜಪ್ತಿ ಮಾಡಲಾಯಿತು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಬಿಂದನ್ ಪಾಟೀಲ, ಪೊಲೀಸ್ ಇನ್‌ಸ್ಪೆಕ್ಟರ್ ಅಲಿ ಶೇಖ್ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

Previous articleಅತ್ಯಾಚಾರ ಪ್ರಕರಣ: ಮೂರನೇ ಆರೋಪಿ ಬಂಧನ
Next articleಇಂದಿನಿಂದ ಬ್ರಾಂಡ್ ಮದ್ಯ ಬೆಲೆಯಲ್ಲಿ ಇಳಿಕೆ