ಅಕ್ರಮ ಮರಳು ಸಾಗಣೆ ಜೋರು: ಹಗಲು ಬೈಕ್ ರಾತ್ರಿ ಕತ್ತೆಗಳ ಬಳಕೆ

0
10

ರಬಕವಿ-ಬನಹಟ್ಟಿ ನಗರಕ್ಕೆ ಅಂಟಿಕೊಂಡಿರುವ ಕೃಷ್ಣೆಯ ಒಡಲು ಭೂಗಳ್ಳರ ಕಣ್ಣಿಗೆ ಬಿದ್ದಿದ್ದು, ಬೇಸಿಗೆ ಸಂದರ್ಭ ನೀರಿನ ಪ್ರಮಾಣ ಕಡಿಮೆಯಾಗಿರುವ ಕಾರಣ ಅಕ್ರಮ ಮರಳು ದಂಧೆಕೋರರಿಗೆ ಇನ್ನು ಅನುಕೂಲವಾಗಿದೆ. ಅಲ್ಲದೆ ಪೊಲೀಸ್ ಹಾಗು ಅಧಿಕಾರಿಗಳು ನದಿ ಪಾತ್ರಕ್ಕೆ ಕಾರ್ಯದಲ್ಲಿ ನದಿ ಪಾತ್ರಕ್ಕೆ ಬರುತ್ತಿಲ್ಲವೆಂಬ ಧೈರ್ಯದಿಂದ ದಂಧೆಕೋರರು ರಾಜಾರೋಷವಾಗಿ ನದಿಯಿಂದ ಅಕ್ರಮವಾಗಿ ಮರಳು ಸಾಗಣೆ ಎಗ್ಗಿಲ್ಲದೆ ನಡೆಯುತ್ತಿದೆ. ಪ್ರತಿ ವರ್ಷ ಬೇಸಿಗೆ ಸಂದರ್ಭ ಇಲ್ಲಿನ ಕೃಷ್ಣೆಯ ಒಡಲಾಳನ್ನು ಬಗೆಯುತ್ತಿರುವದು ಸಾಮಾನ್ಯವಾಗಿದೆ.
ಈ ಬಾರಿಯೂ ಸಮೀಪದ ಆಸಂಗಿ, ಅಸ್ಕಿ, ಮಹಿಷವಾಡಗಿ ಸುತ್ತಲು ಹಗಲು ಹೊತ್ತು ಬೈಕ್‌ಗಳ ಮೂಲಕ ಚೀಲದಲ್ಲಿ ತುಂಬಿಕೊಂಡು ಮರಳು ಎತ್ತುತ್ತಿದ್ದರೆ, ರಾತ್ರಿಯಾಗುತ್ತಿದ್ದಂತೆ ನೂರಾರು ಕತ್ತೆಗಳನ್ನು ಬಳಸಿಕೊಂಡು ಅಕ್ರಮ ಮರಳು ಲೂಟಿ ಮಾಡಲಾಗುತ್ತಿದೆ.
ಜಿಲ್ಲಾಡಳಿತ, ತಾಲೂಕಾಡಳಿತ ಹಾಗು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕೂಡಲೇ ಅಕ್ರಮವಾಗಿ ಮರಳು ಸಾಗಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

Previous articleಊಟ ಸೇವಿಸಿದ ಬಳಿಕ 35 ಮಂದಿ ಸೈನಿಕರು ಅಸ್ವಸ್ಥ
Next articleಮತ್ತೆ ಕಾರ್ಯಾರಂಭಗೊಂಡ ಮಹಿಷವಾಡಗಿ ಸೇತುವೆ..!