ʻಪೆದ್ದನ ಜೊತೆ ಚರ್ಚೆಗೆ ನಾವು ಸಿದ್ಧವಿಲ್ಲʼ

0
13
Siddaramaiah

ಬಳ್ಳಾರಿ: ಸಚಿವ ಶ್ರೀರಾಮುಲು ಅವರನ್ನು ಪೆದ್ದ ಎಂದು ಏಕವಚನದಲ್ಲಿ ಹೀಗಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ, `ನಿನ್ನಂಥ ಪೆದ್ದನ ಜೊತೆ ಚರ್ಚೆಗೆ ನಾವು ಸಿದ್ಧವಿಲ್ಲ’ ಎಂದು ವ್ಯಂಗ್ಯವಾಡಿದರು.
ಜನವಿರೋಧಿ ಸರ್ಕಾರ ನೀಡುತ್ತಿರುವ ನಿಮಗೆ ಮತ್ತು ದೇಶಕ್ಕೆ ಸಾಲಕ್ಕೆ ತಳ್ಳಿರುವ ಪ್ರಧಾನಿ ಮೋದಿಯವರಿಗೆ ನಾಚಿಕೆಯಾಗಬೇಕು ಎಂದರು.
ದೇಶಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ನೀಡಿದ ಕೊಡುಗೆಗಳ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಶ್ರೀರಾಮುಲು ನೀಡಿದ ಆಹ್ವಾನಕ್ಕೆ ಸಿದ್ದರಾಮಯ್ಯ ಐಕ್ಯತಾ ಸಮಾವೇಶದಲ್ಲಿ ಈ ರೀತಿ ಟೀಕಿಸಿದರು.
ಬಳ್ಳಾರಿ ಗಣಿಗಾರಿಕೆಗೆ ರಾಮುಲು ಕೊಡುಗೆ ಏನು ಎಂಬುದು ಜನರಿಗೆ ಗೊತ್ತಿಲ್ಲವೇ? ನಾ ಖಾವುಂಗಾ, ನಾ ಖಾನೇ ದೂಂಗಾ ಎನ್ನುವ ಪ್ರಧಾನಿ ಮೋದಿಯವರನ್ನು ಹೊಗಳಿ, 40 ಪರ್ಸೆಂಟ್ ಸರ್ಕಾರವನ್ನು ನಡೆಸುತ್ತಿರುವವರ ಜೊತೆ ಕಾಂಗ್ರೆಸ್ ಏಕೆ ಬಹಿರಂಗ ಚರ್ಚೆ ಮಾಡಬೇಕು ಎಂದು ಕೇಳಿದರು. ಮೋದಿಯನ್ನು ಹೊಗಳುತ್ತ ಈ ರಾಜ್ಯವನ್ನು ಹಾಳು ಮಾಡುತ್ತಿದ್ದೀರಿ ಎಂದು ಮುಖ್ಯಮಂತ್ರಿಯಾದಿಯಾಗಿ ಇಡೀ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.

Previous articleಕಲ್ಯಾಣ ಮಾಡಿದವರು ಸೋನಿಯಾ
Next articleʻಮೋದಿಯಿಂದ ದೇಶ ಅಪಾಯದಲ್ಲಿʼ