ʻಕೋಟಿʼಯ ‘ಜನತಾ ಸಿಟಿ’ ಹಾಡು ಬಿಡುಗಡೆ

0
20

ಬೆಂಗಳೂರು: ‘ಜನತಾ ಸಿಟಿ’ಯಲ್ಲಿ ‘ಕೋಟಿ’ ಎಂಬ ಕೋಟಿ ಸಿನಿಮಾದ ಜನತಾ ಸಿಟಿ” ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ.
ವಾಸುಕಿ ವೈಭವ್ ಸಾಹಿತ್ಯ ರಚಿಸಿ, ಸಂಯೋಜಿಸಿರುವ ಈ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋವನ್ನು ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ ವೀಕ್ಷಿಸಬಹುದು. ಕೋಟಿʼ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.
ಜೂನ್ 14 ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದೆ.

ಅದಕ್ಕೂ ಮುನ್ನ ಕೋಟಿಯ ಎರಡನೇ ಹಾಡು ‘ಜನತಾ ಸಿಟಿ’ಯ ಲಿರಿಕಲ್ ವಿಡಿಯೋವನ್ನು ನೀವೊಮ್ಮೆ ನೋಡಿ…

Previous articleಕುಡಿಯುವ ನೀರಿನ ಪರೀಕ್ಷೆ ನಿತ್ಯವೂ ಆಗಬೇಕು
Next articleಕೆರೆಗೆ ಬಿದ್ದ ಕಾರು: ಓರ್ವ ಸಾವು