ಬಿಜೆಪಿ ಅರ್ಧನಾರೀಶ್ವರರನ್ನು ಅಧ್ಯಕ್ಷರನ್ನಾಗಿ ಮಾಡಬಹುದೆಂಬ ಹರಿಪ್ರಸಾದ್ ಹೇಳಿಕೆಗೆ ದೊಡ್ಡನಗೌಡ ಕಿಡಿ
ಹುಬ್ಬಳ್ಳಿ : ಬಿ.ಕೆ ಹರಿಪ್ರಸಾದ್‌ಗೆ ತಮ್ಮ ಪಕ್ಷದ್ದೇ ಗೊತ್ತಿಲ್ಲ. ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬುದು ನಮ್ಮ ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ವಿಧಾನ ಸಭಾ ಪ್ರತಿಪಕ್ಷ ಸಚೇತಕ ದೊಡ್ಡನಗೌಡ ಪಾಟೀಲ ಖಂಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರ ಪಕ್ಷದಲ್ಲಿ ಹರಿಪ್ರಸಾದ್ ಸ್ಥಿತಿ ಏನಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ತಮ್ಮ ಸ್ಥಿತಿಯ ಬಗ್ಗೆ ಹರಿಪ್ರಸಾದ್ ವಿಚಾರ ಮಾಡಲಿ. ಕಾಂಗ್ರೆಸ್‌ನಲ್ಲಿ ಏನೇನಾಗುತ್ತಿದೆ. ಕುರ್ಚಿಗಾಗಿ ಕಿತ್ತಾಟ, ಕಾಂಗ್ರೆಸ್ ಸರ್ಕಾರದ ಆಡಳಿತ ಅಧೋಗತಿ, ಆರ್ಥಿಕ ಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ನೋಡಿಕೊಳ್ಳಲಿ . ಅದನ್ನು ಬಿಟ್ಟು ಬಾಯಿಗೆ ಬಂದಂತೆ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ದೊಡ್ಡನಗೌಡ ಎಚ್ಚರಿಕೆ ನೀಡಿದರು.