ಸಿಎಂ, ಡಿಸಿಎಂ ದೆಹಲಿಗೆ ಭೇಟಿ ಕಾರಣ ಹೇಳಿದ ಸಚಿವೆ

ಧಾರವಾಡ: ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ತಮ್ಮ ಕೆಲಸದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುತ್ತಾರೆ. ಆದರೆ, ವಿಪಕ್ಷಕ್ಕೆ ಮಾಡಲು ಕೆಲಸವಿಲ್ಲದ ಕಾರಣ ಬೇರೆ ಅರ್ಥ ಕಲ್ಪಿಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಅಥವಾ ಡಿಸಿಎಂ ಅವರವರ ಕೆಲಸ ಇದ್ದಾಗ ದೆಹಲಿಗೆ ತೆರಳುತ್ತಾರೆ. ನಾವೂ ಸಹ ಅನೇಕ ಸಂದರ್ಭದಲ್ಲಿ ಕೆಲಸದ ನಿಮಿತ್ತ ದೆಹಲಿಗೆ ಹೋಗುತ್ತೇವೆ. ಆದರೆ, ಇದಕ್ಕೆ ವಿಶೇಷ ಬಣ್ಣ ಹಚ್ಚುವ ಕೆಲಸ ಆಗುತ್ತದೆ. ಕಾಂಗ್ರೆಸ್ ೧೩೬ ಸ್ಥಾನ ಗೆದ್ದಾಗಲೂ ವಿರೋಧ ಪಕ್ಷದವರು ಕೇವಲ ಮೂರು ತಿಂಗಳ ಸರಕಾರ ಎಂದೆಲ್ಲ ಹೇಳಿದ್ದರು. ಈಗ ಸುಮ್ಮನೆ ಕುಳಿತಿದ್ದಾರೆ. ಅವರದ್ದು ಇಷ್ಟೇ ಕೆಲಸ ಎಂದು ವ್ಯಂಗ್ಯವಾಡಿದರು.