ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಕೆಲಸ ಮಾಡಬೇಕು? ಎಂಬ ಆಸಕ್ತಿ ಇದೆಯೇ?, ಕೆಲಸ ಹುಡುಕುತ್ತಿದ್ದೀರಾ? ಇಲ್ಲಿದೆ ಮಾಹಿತಿ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, (ಬಿಎಂಆರ್‌ಸಿಎಲ್) ನೇಮಕಾತಿ ಆದೇಶವೊಂದನ್ನು ಹೊರಡಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 50 ರಿಂದ 62,000 ರೂ. ತನಕ ವೇತನ ನಿಗದಿ ಮಾಡಲಾಗಿದೆ.
ಬಿಎಂಆರ್‌ಸಿಎಲ್ ಅಸಿಸ್ಟೆಂಟ್ ಚೀಫ್ ಸೆಕ್ಯುರಿಟಿ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 5 ಹುದ್ದೆಗಳಿದ್ದು, ಆಸಕ್ತರು, ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು 12/8/2025 ಮತ್ತು ಅರ್ಜಿಯ ಮುದ್ರಣ ಪ್ರತಿಯನ್ನು ಸಲ್ಲಿಕೆ ಮಾಡಲು 18/8/2025 ಕೊನೆಯ ದಿನವಾಗಿದೆ.
ಹುದ್ದೆ, ವೇತನ ವಿವರ: ಈ ಹುದ್ದೆಗಳಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ/ ನಿವೃತ್ತರಾಗಿರುವ ಭಾರತೀಯ ಸೇನೆ/ ವಾಯುಪಡೆ/ ನೌಕಾಪಡೆ/ ರಾಜ್ಯ ಪೊಲೀಸ್/ ಸಿಆರ್‌ಪಿಎಫ್/ ಸಿಎಪಿಎಫ್/ ಬಿಎಸ್‌ಎಫ್/ ಸಿಐಎಸ್‌ಎಫ್/ ರಾಜ್ಯ ಅಗ್ನಿಶಾಮಕ ದಳದಲ್ಲಿ ಕಾರ್ಯ ನಿರ್ವಹಣೆ ಮಾಡುವವರು ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಸಂಪೂರ್ಣ ಗುತ್ತಿಗೆ ಆಧಾರಿತವಾಗಿದೆ.
ಅರ್ಜಿ ಸಲ್ಲಿಸುವವರು ಕಾರ್ಯ ನಿರತ ಅಥವ ನಿವೃತ್ತರಾಗಿರಬೇಕು. ಕ್ಯಾಪ್ಟನ್, ಲೆಫ್ಟಿನೆಂಟ್, ಫ್ಲೈಟ್ ಲೆಫ್ಟಿನೆಂಟ್, ಅಸಿಸ್ಟೆಂಟ್ ಕಮಾಂಡೆಂಟ್, ಅಸಿಸ್ಟೆಂಟ್ ಕಮೀಷನರ್ ಆಫ್ ಪೊಲೀಸ್ ಅಥವ ತತ್ಸಮಾನ ಶ್ರೇಣಿಯಲ್ಲಿರಬೇಕು.
ಅಸಿಸ್ಟೆಂಟ್ ಚೀಫ್ ಸೆಕ್ಯುರಿಟಿ ಆಫೀಸರ್ (ಗ್ರೇಡ್-ಇ1) 60 ವರ್ಷಕ್ಕಿಂತ ಕೆಳಗಿನವರಿಗೆ 62,500 ರೂ. ಮತ್ತು 60 ವರ್ಷ ಮೇಲ್ಪಟ್ಟವರಿಗೆ 50,000 ರೂ. ವೇತನವನ್ನು ನಿಗದಿಗೊಳಿಸಲಾಗಿದೆ. ವಿವಿಧ ಭತ್ಯೆಗಳು ಪ್ರತ್ಯೇಕ.
ಗುತ್ತಿಗೆ ನೇಮಕಾತಿ ಅವಧಿ 60 ವರ್ಷಕ್ಕಿಂತ ಕಡಿಮೆ ಇರುವ ಅಭ್ಯರ್ಥಿಗಳಿಗೆ 3 ವರ್ಷ ಮತ್ತು 60 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳಿಗೆ 1 ವರ್ಷವಾಗಿದೆ. ಅಭ್ಯರ್ಥಿಗಳ ಕಾರ್ಯ ವೈಖರಿ ಮೇಲೆ ಅವಧಿ ವಿಸ್ತರಣೆಗೆ ಅವಕಾಶವಿದೆ.
ಸಂದರ್ಶನವನ್ನು ನಡೆಸಿದ ಬಳಿಕ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ರಾಜಕೀಯ ಸೇರಿದಂತೆ ಯಾವುದೇ ಒತ್ತಡ ತರುವ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕಾರ ಮಾಡಲಾಗುತ್ತದೆ.
ಅಭ್ಯರ್ಥಿಗಳಿಗೆ ಕನ್ನಡ ಜ್ಞಾನ ಕಡ್ಡಾಯವಾಗಿದೆ. ವಿದ್ಯಾಭ್ಯಾಸ, ಅನುಭವ ಪ್ರಮಾಣ ಪತ್ರಗಳನ್ನು ಮುದ್ರಿತ ಅರ್ಜಿಯೊಂದಿಗೆ ಕಳಿಸಬೇಕಿದೆ. ಯಾವುದೇ ಸಮಯದಲ್ಲಿ ನೇಮಕಾತಿಯನ್ನು ಸ್ಥಗಿತಗೊಳಿಸುವ ಹಕ್ಕನ್ನು ಬಿಎಂಆರ್‌ಸಿಎಲ್ ಕಾಯ್ದಿರಿಸಿಕೊಂಡಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡುವ ಮೊದಲು ನೇಮಕಾತಿ ಅಧಿಸೂಚನೆಯನ್ನು ವಿವರವಾಗಿ ಓದಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ಮುದ್ರಿತ ಅರ್ಜಿಯನ್ನು ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಬಿಎಂಆರ್‌ಸಿಎಲ್ ವೆಬ್‌ಸೈಟ್‌ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಕೆ ಮಾಡಲು ವಿಳಾಸ: The General Manager (HR), Bangalore Metro Rail Corporation Limited,
III Floor, BMTC Complex, K.H. Road, Shanthinagar, Bengaluru 560027 ವಿಳಾಸಕ್ಕೆ ಅರ್ಜಿ ಸಲ್ಲಸಬೇಕು. ಲಕೋಟೆ ಮೇಲೆ APPLICATION FOR THE POST OF ASSISTANT CHIEF
SECURITY OFFICER ಎಂದು ಬರೆದಿರಬೇಕು.