60 ಪ್ಲಸ್‌ ಬಂದ್ರೆ ಲಿಂಗಾಯತರು ಸಿಎಂ

0
33
ಶಾಮನೂರು ಶಿವಶಂಕರಪ್ಪ

ಕಾಂಗ್ರೆಸ್‌ ಪಕ್ಷದ ಅರವತ್ತಕ್ಕೂ ಹೆಚ್ಚು ಲಿಂಗಾಯತರು ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಲಿಂಗಾಯತರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ 70 ಜನ ಲಿಂಗಾಯತರಿಗೆ ಟಿಕೆಟ್‌ ಕೊಡಲು ಕೇಳಿದ್ದೇವೆ. ಇದರಲ್ಲಿ 60 ರಿಂದ 70 ಸೀಟ್ ಬಂದರೆ ಲಿಂಗಾಯತರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದಾರೆ.
ಗೆದ್ದವರಲ್ಲಿ ಅವರು ಯಾರಿಗೆ ಬೇಕು ಅವರಿಗೆ ಆಯ್ಕೆ ಮಾಡಬಹುದು. ಈ ಪೈಕಿ ಮೆಜಾರಿಟಿ ಬಂದವರು ಸಿಎಂ ಆಗುತ್ತಾರೆ. ಲಿಂಗಾಯತರಲ್ಲಿ, ಎಂ.ಬಿ. ಪಾಟೀಲ್, ಎಸ್.ಎಸ್. ಮಲ್ಲಿಕಾರ್ಜುನ್, ಖಂಡ್ರೆ ಸಿಎಂ ರೇಸ್‌ನಲ್ಲಿ ಇದ್ದಾರೆ ಎಂದರು.

Previous articleಸಮಯ ಪ್ರಜ್ಞೆ ಮೆರೆದ ವೃದ್ಧೆ; ತಪ್ಪಿದ ಸಂಭಾವ್ಯ ರೈಲು ಅವಘಡ
Next articleಅಭ್ಯರ್ಥಿಗೆ ಬಹಿರಂಗವಾಗಿ ಹಣ ಕೊಟ್ಟ ಸ್ವಾಮೀಜಿ