” 40% ಕಮಿಷನ್ ನಲ್ಲೇ ರಾಜ್ಯ ಸರಕಾರದ ಆಡಳಿತ”

0
12

ಮಂಗಳೂರು: “ರಾಜ್ಯದಲ್ಲಿ ಯಾವುದೇ ಕೆಲಸಕ್ಕೆ ಲಂಚ ಕೊಡದೆ ಕೆಲಸ ಆಗುವುದೇ ಇಲ್ಲ. ಹೊರರಾಜ್ಯಗಳಿಗೂ ಈ ಲಂಚ ಅನ್ನೋದು ಬೃಹತ್ತಾಗಿ ಹಬ್ಬಿದೆ. ಕರ್ನಾಟಕ ರಾಜ್ಯ ಹಿಂದೆ ತನ್ನ ಅಭಿವೃದ್ಧಿಗಾಗಿ ಹೆಸರು ಪಡೆದಿತ್ತು. ಆದರೆ ಈಗ ಆ ಹೆಸರನ್ನು ಕಳೆದುಕೊಳ್ಳುತ್ತಿದ್ದೇವೆ” ಎಂದು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, “ಬಿಜೆಪಿ ಶಾಸಕರಿಗೆ 40% ಕಮಿಷನ್ ಕೊಟ್ಟರೆ ಎಲ್ಲಾ ಕೆಲಸ ಆಗುತ್ತದೆ ಅನ್ನೋದು ಜಗಜ್ಜಾಹೀರಾಗಿದೆ. ಕರ್ನಾಟಕ ಗುತ್ತಿಗೆದಾರ ಸಂಘ ಸಹಿತ ಹತ್ತಾರು ಸಂಘಟನೆಗಳು 40% ಭ್ರಷ್ಟಾಚಾರ ಕುರಿತು ಪ್ರಧಾನಿಯವರಿಗೆ ಪತ್ರ ಬರೆದಿದೆ. ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ? ಮೋದಿಯವರು ನಾ ಖಾವೂಂಗಾ ನಾ ಖಾನೆ ದೂಂಗಾ ಅನ್ನುತ್ತಾರೆ, ಆದರೆ ತಿನ್ನುವವರಿಗೆ ಬೆಂಬಲ ನೀಡುತ್ತಿದ್ದಾರೆ. ಬೇರೆ ಎಲ್ಲಾ ರಾಜ್ಯಗಳಲ್ಲಿ ತಮಗೆ ಆಗದವರ ಮೇಲೆ ಇಡಿ ಅಸ್ತ್ರ ಪ್ರಯೋಗಿಸುವ ಮೋದಿ ಇಲ್ಲಿ ಯಾಕೆ ಗಮನಿಸುತ್ತಿಲ್ಲ? ವಿದ್ಯಾವಂತ ಯುವಜನರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇವರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಚಿಂತೆಯಿಲ್ಲ. 2,70,000 ಜನರಿಗೆ ಸರಕಾರಿ ಉದ್ಯೋಗ ಖಾಲಿಯಿದೆ ಆದರೆ ಸರಕಾರ ಅದನ್ನೇಕೆ ಭರ್ತಿ ಮಾಡುತ್ತಿಲ್ಲ? ಯಾಕೆಂದರೆ ಇದನ್ನು ತುಂಬಿಸುವಾಗ 50% ಎಸ್ ಸಿ, ಎಸ್ ಟಿ ಕೆಟಗರಿಯವರನ್ನು ಭರ್ತಿ ಮಾಡಬೇಕು. ಅವರಿಗೆ ಬೇಕಾದವರನ್ನು ಸೇರಿಸಲು ಆಗುವುದಿಲ್ಲ” ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜೆ.ಆರ್. ಲೋಬೊ, ರಮಾನಾಥ್ ರೈ, ಯು.ಟಿ. ಖಾದರ್, ಚರಣ್ ಸಿಂಗ್ ಸಪ್ರಾ, ಐವನ್ ಡಿಸೋಜ, ಮಂಜುನಾಥ್ ಭಂಡಾರಿ ಉಪಸ್ಥಿತರಿದ್ದರು.

Previous articleಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರ ಕೂಪ
Next articleಮಾಜಿ ಸಚಿವ ಡಿ.ಬಿ. ಇನಾಮದಾರ ವಿಧಿವಶ