36 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

0
111
ISRO

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾನುವಾರ ಬೆಳಗ್ಗೆ ಉಪಗ್ರಹಗಳ ಉಡಾವಣೆ ಕಾರ್ಯ ಯಶಸ್ವಿಯಾಗಿ ನಡೆದಿದೆ. ಇದು ಇಸ್ರೋದ ಅತಿ ದೊಡ್ಡ ಯೋಜನೆಗಳಲ್ಲಿ ಒಂದಾಗಿತ್ತು. 43.5 ಮೀಟರ್ ಎತ್ತರದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ 2ನೇ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಚಂದ್ರಯಾನ-2 ಮಿಷನ್ ಸೇರಿದಂತೆ ಐದು ಯಶಸ್ವಿ ಹಾರಾಟಗಳನ್ನು ಪೂರ್ಣಗೊಳಿಸಿರುವ ಇಸ್ರೋದ ಅತ್ಯಂತ ಭಾರವಾದ ಉಡಾವಣಾ ವಾಹನ 36 ಉಪಗ್ರಹಗಳನ್ನು ಹೊತ್ತು ನಭಕ್ಕೆ ನೆಗೆದಿದೆ.

Previous articleಯಾರೂ ಮಾಡದ ಕೆಲಸ ಬಿಜೆಪಿ ಸರ್ಕಾರ ಮಾಡಿದೆ: ಸಚಿವ ಮುರುಗೇಶ ನಿರಾಣಿ
Next articleಪ್ರತಿ ವರ್ಷ ಖಾಸಗಿ ವಲಯದಲ್ಲಿ 13 ಲಕ್ಷ ಉದ್ಯೋಗ ಸೃಷ್ಟಿ