ಹೆಮ್ಮೆಯಿಂದ ಆರ್‌ಎಸ್‌ಎಸ್‌ನೊಂದಿಗೆ ಗುರುತಿಸಿಕೊಂಡಿದ್ದೇನೆ: ಬೊಮ್ಮಾಯಿ

ಆರ್‌ಎಸ್‌ಎಸ್‌ ಸಿದ್ಧಾಂತ, ದೇಶಭಕ್ತಿಯಿಂದ ನಾನು ಹೆಮ್ಮೆಯಿಂದ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದೇನೆ. ಅದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ತಾವು ಎಂತಹ ಸಂಘಟನೆಗಳ ಜತೆಗಿದ್ದಾರೆ ಎನ್ನುವುದನ್ನ ಅವರೇ ಪ್ರಶ್ನಿಸಿಕೊಳ್ಳಲಿ ಎಂದರು. ಇನ್ನು ಸುಳ್ಳು ಆರೋಪಕ್ಕೆ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎನ್ನುವುದಕ್ಕೆ ಕಾನೂನು ಇದೆ. ಅದಕ್ಕೆ ಸಚಿವ ಮುನಿರತ್ನ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ ಎಂದರು.