ಹು-ಧಾ ಪೊಲೀಸ್‌ ಆಯುಕ್ತರಾಗಿ ಸಂತೋಷ್‌ಬಾಬು ನೇಮಕ

0
40

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದ ಪೊಲೀಸ್ ಆಯುಕ್ತರ ಹುದ್ದೆಗೆ ಹಂಗಾಮಿ ಆಯುಕ್ತರನ್ನಾಗಿ ಗುಪ್ತವಾರ್ತೆಯ ಉಪ ನಿರ್ದೇಶಕರಾಗಿರುವ ಐಪಿಎಸ್ ಅಧಿಕಾರಿ ಕೆ. ಸಂತೋಷ್‌ಬಾಬು ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಪೊಲೀಸ್ ಆಯುಕ್ತರಾಗಿದ್ದ ರಮಣ್ ಗುಪ್ತಾ ಅವರು ವರ್ಗಾವಣೆಯಾದ ನಂತರ ಮಹಾನಗರ ಪೊಲೀಸ್ ಆಯುಕ್ತರ ಹುದ್ದೆ ಖಾಲಿ ಇದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ 2011ನೇ ಬ್ಯಾಚಿನ ಸಂತೋಷ ಬಾಬು ಅವರನ್ನು ನೇಮಕ ಮಾಡಲಾಗಿದೆ. ಸಂತೋಷ ಬಾಬು ಅವರು ಈ ಹಿಂದೆ ಗದಗ ಎಸ್‌ಪಿ ಆಗಿಯೂ ಅತ್ಯಂತ ದಕ್ಷ ರೀತಿಯಿಂದ ಕಾರ್ಯನಿರ್ವಹಿಸಿದ್ದಾರೆ.

Previous articleದಾರಿ ಬಿಡುವ ವಿಚಾರಕ್ಕೆ ಜಗಳ: ಮಹಿಳೆ ಹತ್ಯೆ
Next articleಆ. 11ಕ್ಕೆ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭ