ಇಳಕಲ್ : ಹುಡುಗಿಯರನ್ನು ಚುಡಾಯಿಸಿದ ಮೂವರು ಕಿಡಿಗೇಡಿಗಳಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಗುರುವಾರದಂದು ಮುಂಜಾನೆ ನಡೆದಿದೆ. ಕಾಲೇಜಿಗೆ ಹೋಗುತ್ತಿದ್ದ ಹುಡುಗಿಯರಿಗೆ ಕೀಟಲೆ ಕೊಟ್ಟ ಕಿಡಿಗೇಡಿಗಳನ್ನು ನೋಡಿದ ಸಾರ್ವಜನಿಕರು ಅವರಿಗೆ ಚೆನ್ನಾಗಿ ಥಳಿಸಿ ಪೋಲಿಸ್ ಠಾಣೆಗೆ ತೆಗೆದುಕೊಂಡು ಹೋಗಿ ಅಲ್ಲಿ ಪೋಲಿಸರಿಗೆ ಒಪ್ಪಿಸಿದರು ತಮ್ಮ ಕೈಗೆ ಸಿಕ್ಕ ಕಿಡಿಗೇಡಿಗಳನ್ನು ಪೋಲಿಸರು ಚಳಿ ಬಿಡಿಸಿ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಪಿಎಸ್ ಐ ಕೃಷ್ಣವೇಣಿ ಗುರ್ಲಹೊಸೂರ ವಿಚಾರಣೆ ನಡೆಸಿದ್ದಾರೆ

























