ಹರಿಹರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಂದಿಗಾವಿ ಶ್ರೀನಿವಾಸ್

0
16
ನಂದಿಗಾವಿ ಶ್ರೀನಿವಾಸ್

ದಾವಣಗೆರೆ: ಬಿಡುಗಡೆಗೊಂಡಿರುವ ಕಾಂಗ್ರೆಸ್ ನ ನಾಲ್ಕನೇ ಪಟ್ಟಿಯಲ್ಲಿ ಜಿಲ್ಲೆಯ ಹರಿಹರ ಕ್ಷೇತ್ರದ ಅಭ್ಯರ್ಥಿಯಾಗಿ ನಂದಿಗಾವಿ ಶ್ರೀನಿವಾಸ್ ಅವರ ಹೆಸರನ್ನು ಘೋಷಿಸಲಾಗಿದೆ. ಕಾಂಗ್ರೆಸ್ಸಿನಲ್ಲಿ ಹರಿಹರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೆಚ್.ಎಂ. ರೇವಣ್ಣನವರ ಹೆಸರು ಕೂಡ ಕೇಳಿಬಂದಿತ್ತು. ಈ ನಡುವೆ ಹರಿಹರ ಶಾಸಕ ಎಸ್. ರಾಮಪ್ಪ ಸಿದ್ದರಾಮಯ್ಯ ಅವರಿಗಾದರೆ ಮಾತ್ರ ಕ್ಷೇತ್ರ ಬಿಟ್ಟುಕೊಡುತ್ತೇನೆ. ಒಂದು ವೇಳೆ ಇತರರಿಗೆ ಪಕ್ಷ ಟಿಕೆಟ್ ನೀಡಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಸಹ ಈಚೆಗೆ ಮಾಧ್ಯಮಕ್ಕೆ ತಿಳಿಸಿದ್ದರು. ಈಗ ಕಾಂಗ್ರೆಸ್ ನಾಲ್ಕನೇ ಪಟ್ಟಿಯಲ್ಲಿ ಕೊನೆಗೂ ಎಸ್. ರಾಮಪ್ಪಗೆ ಟಿಕೆಟ್ ತಪ್ಪಿದ್ದು, ನಂದಿಗಾವಿ ಶ್ರೀನಿವಾಸ್ ಟಿಕೆಟ್ ಒಲಿದಿದ್ದು ರಾಮಪ್ಪನವರ ಮುಂದಿನ ನಡೆಯೇನೆಂಬುದು ಕಾದು ನೋಡಬೇಕಿದೆ.

Previous articleಕಾಂಗ್ರೆಸ್‌ 4ನೇ ಪಟ್ಟಿ ಬಿಡುಗಡೆ
Next articleಕರ್ನಾಟಕದಲ್ಲಿ ಭ್ರಷ್ಟ ಮುಕ್ತ ಸರ್ಕಾರ ಆಡಳಿತಕ್ಕೆ