ಸ್ವಾಮೀಜಿಗಳ ಜತೆ ಶೆಟ್ಟರ ಮಾತುಕತೆ

0
15
ಶೆಟ್ಟರ

ಕಾಂಗ್ರೆಸ್ ಸೇರ್ಪಡೆಯ ಬಳಿಕ ಹುಬ್ಬಳ್ಳಿಗೆ ಆಗಮಿಸಿದ ಜಗದೀಶ ಶೆಟ್ಟರ ಮಠ, ಸ್ವಾಮೀಜಿಗಳ ಭೇಟಿಗೆ ದೌಡಾಯಿಸಿದರು. ವಿಮಾನ ನಿಲ್ದಾಣದಿಂದ ನೇರವಾಗಿ ರಂಭಾಪುರಿ ಕಲ್ಯಾಣ ಮಂಟಪಕ್ಕೆ ತೆರಳಿ ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ಬಳಿಕ ಶ್ರೀಗಳ ಬಳಿ 30 ನಿಮಿಷಕ್ಕೂ ಹೆಚ್ಚು ಕಾಲ ರಹಸ್ಯ ಮಾತುಕತೆ ನಡೆಸಿದರು. ಅಲ್ಲಿಂದ ಮೂರುಸಾವಿರ ಮಠಕ್ಕೆ ಭೇಟಿ ನೀಡಿ ಜಗದ್ಗುರು ರಾಜಯೋಗಿಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಜಗದೀಶ ಶೆಟ್ಟರ ಜೊತೆಯೇ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹೆಜ್ಜೆ ಹಾಕಿದರು.

Previous articleಉತ್ತರ-ದಕ್ಷಿಣಕ್ಕೆ ಕಾಂಗ್ರೆಸ್‌ನಿಂದ ಅಪ್ಪ ಮಗ ನಾಮಪತ್ರ ಸಲ್ಲಿಕೆ
Next articleಎಸ್ಸಾರ್-ರಾಹುಲ್ ಗಾಂಧಿ ಮಾತುಕತೆ