ಸೇತುವೆ ಬಳಿ ಹಳೇ ಕಾಲದ ನಾಣ್ಯ ಪತ್ತೆ

0
12

ಚಿತ್ರದುರ್ಗ: ಭೈರಾಪುರ ಬಳಿ ಹಳೇ ಕಾಲದ್ದೆನ್ನಲಾದ ನಾಣ್ಯಗಳು ಪತ್ತೆಯಾಗಿವೆ, ಬಹುತೇಕ ನಾಣ್ಯ ಛತ್ರಪತಿ ಶಿವಾಜಿಯ ಮುಖಚಿತ್ರ ಹೊಂದಿದ್ದು ಹಿಂಬದಿಯಲ್ಲಿ ಕತ್ತಿ-ಗುರಾಣಿ ಚಿತ್ರವಿದ್ದು 1674ಎಂದು ಇಸವಿಯನ್ನ ನಮೂದಿಸಿರುವ ತಾಮ್ರದ ಮಾದರಿಯ ಐವತ್ತಕ್ಕೂ ಹೆಚ್ಚು ನಾಣ್ಯಗಳು ಸೇತುವೆ ಬಳಿ‌ ಪತ್ತೆ ಆಗಿವೆ. ಜಿಲ್ಲೆಯ ಮೊಣಕಾಲ್ಮೂರು ತಾಲ್ಲೂಕಿನ ಭೈರಾಪುರದ ಗ್ರಾಮದಲ್ಲಿರುವ ಸೇತುವೆಯ ಬಳಿ ಕುರಿ ಕಾಯುತ್ತಿದ್ದ ಕುರಗಾಹಿಗಳಿಗೆ ಈ ನಾಣ್ಯಗಳು ದೊರತಿವೆ ಎನ್ನಲಾಗಿದ್ದು, ಸೇತುವೆ ಬಳಿ‌ ಸಿಕ್ಕ ನಾಣ್ಯಗಳನ್ನು ಮನೆಗೆ ಕೊಂಡೊಯ್ದಿರುವ ಜನರು. ಅಧಿಕಾರಿಗಳು, ಸಂಶೋಧಕರು ಪರಿಶೀಲನೆ ನಡೆಸಲಿ ಎಂದು ಗ್ರಾಮದ ಚಿತ್ತಯ್ಯ ಮನವಿ ಮಾಡಿದ್ದಾರೆ.

Previous articleಕಾಳಜಿಯ ಜತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ
Next articleವೀರ ಸಾವರ್ಕರ್ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಉದ್ಘಾಟಿಸಲಿರುವ ಮೋದಿ