ಸುರಂಗದ ಕತ್ತಲಲ್ಲಿ ಲೂಟಿಯ ಬೆಳಕು!

0
36

ಬೆಂಗಳೂರು: ಸಿಎಂ ಕುರ್ಚಿ ಗಿಟ್ಟಿಸಿಕೊಳ್ಳಲು ಡಿಸಿಎಂ ಹಿಡಿದಿರುವ ವಾಮ ಮಾರ್ಗವೇ ಸುರಂಗ ಮಾರ್ಗ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ There is loot at the end of the tunnel! ‘ಕೈ’ಹೈಕಮಾಂಡ್ ಗೆ ಕಪ್ಪ ಕಾಣಿಕೆ ಸಲ್ಲಿಸಿ ಸಿಎಂ ಕುರ್ಚಿ ಗಿಟ್ಟಿಸಿಕೊಳ್ಳಲು ಡಿಸಿಎಂ ಡಿ. ಕೆ. ಶಿವಕುಮಾರ ಅವರು ಹಿಡಿದಿರುವ ವಾಮ ಮಾರ್ಗವೇ ಸುರಂಗ ಮಾರ್ಗ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಸ್ವಹಿತಾಸಕ್ತಿಗೆ ಕನ್ನಡಿಗರ 42,000 ಕೋಟಿ ರೂಪಾಯಿ ತೆರಿಗೆ ಹಣವನ್ನ ಪೋಲು ಮಾಡಿಯೇ ತೀರುತ್ತೇನೆ ಎಂದು ಹಠಕ್ಕೆ ಬಿದ್ದಿದ್ದೀರಿ, ಈಗ ಅದರ ಮೇಲೆ ದುಬಾರಿ ಟೋಲ್ ವಿಧಿಸಲು ಹೊರಟಿರುವುದು ಹಗಲು ದರೋಡೆ ಅಲ್ಲವೇ? ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದೊಂದೇ ಪರಿಹಾರವೇ ಹೊರತು ದುಬಾರಿ ಸುರಂಗ ರಸ್ತೆ ಅಲ್ಲ ಉಪಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದ್ದಾರೆ.

Previous articleಭೀಕರ ಅಪಘಾತ: ತಿರುಪತಿಗೆ ತೆರಳುತ್ತಿದ್ದ ಕರ್ನಾಟಕದ ಮೂವರು ಭಕ್ತರು ಸ್ಥಳದಲ್ಲೇ ಸಾವು
Next articleನೀರಜ್‌ ಚೋಪ್ರಾ: ವಿಶ್ವ ಅಥ್ಲೆಟಿಕ್ಸ್ ಜಾವೆಲಿನ್ ಥ್ರೋ ಪಟ್ಟಿಯಲ್ಲಿ ಅಗ್ರಸ್ಥಾನ