ಸಿದ್ಧಗಂಗಾ ಶಾಲೆಯ ವಿದ್ಯಾರ್ಥಿನಿ ಆರ್. ಚೇತನಾ ಜಿಲ್ಲೆಗೆ ಟಾಪರ್

0
12

ದಾವಣಗೆರೆ: ದಾವಣಗೆರೆಯ ಶ್ರೀ ಸಿದ್ದಗಂಗಾ ಕಾಂಪೋಸಿಟ್ ಹೈಸ್ಕೂಕಲ್‌ನ ವಿದ್ಯಾರ್ಥಿನಿ ಆರ್‌. ಚೇತನಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 624 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯ ಎಸ್ಸೆಸ್ಸೆಲ್ಸಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.
ಕನ್ನಡದಲ್ಲಿ 125ಕ್ಕೆ 125 ಅಂಕ ಸೇರಿ ಇಂಗ್ಲೀಷ್, ಹಿಂದಿ, ಗಣಿತ, ಸಮಾಜ ವಿಜ್ಞಾನದಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿರುವ ಚೇತನಾ ವಿಜ್ಞಾನದಲ್ಲಿ 99 ಅಂಕ ಪಡೆದಿದ್ದಾಳೆ.
ತಂದೆ ರಘುನಾಥ್ ನಿವೃತ್ತ ಸೈನಿಕರಾಗಿದ್ದು, ತಾಯಿ ಶಿಕ್ಷಕಿಯಾಗಿದ್ದಾರೆ. ದಿನಕ್ಕೆ ಸುಮಾರು 6 ಗಂಟೆಗಳ ಕಾಲ ಟೈಂ ಟೇಬಲ್ ಹಾಕಿಕೊಂಡು ಓದುತ್ತಿದ್ದೆ. ಗುರಿ ಮತ್ತು ನಿರಂತರ ಅಭ್ಯಾಸವಿದ್ದರೆ ನಾವು ಅಂಕ ಪಡೆಯುವುದು ಸುಲಭವಾಗುತ್ತದೆ ಎನ್ನುತ್ತಾಳೆ ಟಾಪರ್ ಚೇತನಾ.
ಮನೆಯಲ್ಲಿ ತಂದೆ-ತಾಯಿಯರ ಪ್ರೋತ್ಸಾಹವಿತ್ತು, ಶಾಲೆಯಲ್ಲಿ ಓದಿಗೆ ಶಿಸ್ತುಬದ್ಧವಾದ ವಾತಾವರಣವಿತ್ತು. ಇದರಿಂದಾಗಿಯೇ ತಾನು 624 ಅಂಕಗಳಿಸುವುದು ಸುಲಭವಾಯಿತು. ಮುಂದೆ ತಾನು ಐಎಫ್‌ಎಸ್ ಮಾಡುವ ಗುರಿಯಿದೆ ಎಂದು ತನ್ನ ಕನಸನ್ನು ಹೇಳಿಕೊಂಡಿದ್ದಾಳೆ.

Previous articleಎಸೆಸೆಲ್ಸಿ ಫಲಿತಾಂಶದಲ್ಲಿ ಮೂರು ಸ್ಥಾನ ಕುಸಿತ ಕಂಡ ಬಳ್ಳಾರಿ
Next articleಪೂರ್ಣ ಬಹುಮತದ ಬಿಜೆಪಿ ಸರಕಾರಕ್ಕೆ ಮತ್ತೆ ಅಧಿಕಾರ