ಸಿದ್ದೇಶ್ವರ್ ಸೋಲುವುದನ್ನು ನಾನು ನೋಡಬೇಕು

0
15
ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಜಿ.ಎಂ. ಸಿದ್ದೇಶ್ವರ್ ಗೆ ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹೇಳಿ, ಬೇಕಾದರೆ ನಾನೆ ಅವನಿಗೆ ಫಂಡ್ ಕೊಡುತ್ತೇನೆ. ಸಿದ್ದೇಶ್ವರ್ ಚುನಾವಣೆಯಲ್ಲಿ ಸೋಲುವುದನ್ನ ನಾನೊಮ್ಮೆ ನೋಡಬೇಕು ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವ್ಯಂಗ್ಯವಾಡಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಮನೂರು, ಸಂಸದ ಜಿಂ. ಎಂ ಸಿದ್ದೇಶ್ವರ್ ಈ ಬಾರಿ ಲೋಕಸಭೆ ಚುನಾವಣೆಗೆ ಟಿಕೇಟ್ ತಗೊಂಡು ಬಂದು ನಿಲ್ಲೋಕೆ ಹೇಳಿ, ಲೋಕಸಭೆ ಚುನಾವಣೆಗೆ ನಿಲ್ಲಲು ಕಾಂಗ್ರೆಸ್ ನಿಂದ ಬಹಳ ಜನರಿದ್ದಾರೆ. ಯಾರು ನಿಲ್ಲೊಲ್ಲ ಅಂದ್ರೆ ನಾನೇ ಸೆಡ್ಡು ಹೊಡೆಯೊಕ್ಕೆ ರೆಡಿ ಇದ್ದೇನೆ‌ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಸರ್ಕಾರ ಚುನಾವಣೆಯ ನಂತರ ಗ್ಯಾರಂಟಿ ಯೋಜನೆಯಲ್ಲಿ ಹಾಕುತ್ತಿರುವ ಷರತ್ತುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಸರ್ಕಾರ ಕಿತ್ತುಕೋಳ್ಳುವುದು ಸರಿಯಲ್ಲ. ಮಾತು ಕೊಟ್ಟಂಗೆ ಸರ್ಕಾರ ನಡೆದುಕೊಳ್ಳಬೇಕು ಎಂದು ಹೇಳಿದರು.
ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೋದ್ಯಮಕ್ಕೆ ಹೊಡೆತ ಬಿದ್ದಿದೆ. ಹೀಗೆ ಮುಂದುವರೆದರೆ ಇಂಡಸ್ಟ್ರಿಗಳು ಉಳಿಯುವುದು ಕಷ್ಟ ಆಗಲಿದೆ. ಮಾತು ಕೊಟ್ಟಂತೆ ಮೊದಲು ನಡೆದುಕೊಂಡು, ನಂತರ ವಿದ್ಯುತ್ ದರ ಏರಿಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿ ಎಂದರು.
ವಿದ್ಯುತ್ ದರ ಏರಿಕೆ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾವು ಮಾಡಿಲ್ಲ ಎಂದು ಜವಾವ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಕೆಆರ್ ಇ ಸಿ ದರ ಏರಿಕೆ ಬಗ್ಗೆ ಬಿಜೆಪಿ ಕಾಲದಲ್ಲೇ ಪ್ರಸ್ತಾವ ಆಗಿತ್ತು. ಕಾಂಗ್ರೆಸ್ ನವರು ಸೈನ್ ಮಾಡಿದ್ದಾರೆ ಬಿಟ್ಟಾರೋ ಗೊತ್ತಿಲ್ಲ. ಆದರೆ, ದರ ಪರಿಷ್ಕರಣೆಗೆ ಕಾಂಗ್ರೆಸ್ ನವರು ಒಪ್ಪಬಾರದು. ಹಿಂದೆ ದರ ಹೇಗಿತ್ತೋ ಅದೇ ರೀತಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಗಳಿಗೆ ನಷ್ಟ ಆದ್ರೆ ನಾವೇನು ಮಾಡೋಕೆ ಆಗುತ್ತೇ? ರೈಲುಗಳಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆ ಸಹ ಕಡಿಮೆ ಆಗಿದೆ ಎಂದು ಖಾಸಗಿ ಬಸ್ ಗಳಲ್ಲಿ ಆಗಿರುವ ಪ್ರಯಾಣಿಕರ ಕೊರತೆ ಬಗ್ಗೆ ಶಾಮನೂರು ಪ್ರತಿಕ್ರಿಯೆ ನೀಡಿದರು. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಬಗ್ಗೆ ಪ್ರತಿಕ್ತಿಯಿಸಿ, ಅಖಿಲಭಾರತ ವೀರಶೈವ ಮಹಾಸಭೆಯ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವ. ಸಾಮಾಜಿಕ ಸಮೀಕ್ಷೆ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.ಜಾಗತಿಕ ಲಿಂಗಾಯತ ಮಹಾಸಭಾ ಎಲ್ಲಿದೆ. ಜಾಮದಾರ್ ಒಬ್ಬ ಇದ್ದಾನೆ ಅವನ ಹುಚ್ಚಾಸ್ಪತ್ರೆಗೆ ಕಳಿಸಬೇಕು, ಇಲ್ಲಾ ಅಂದ್ರೆ ನಾವೇ ಅವನನ್ನು ಕಳಿಸುತ್ತೇವೆ. ಪ್ರತ್ಯೇಕ ಧರ್ಮದ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

Previous articleಕೇಂದ್ರ ರಾಜ್ಯ ಸರ್ಕಾರದ ರೈಸ್‌ ರಾಜಕೀಯ: ಸಿದ್ದರಾಮಯ್ಯ ಗರಂ
Next articleಭೀಕರ ಅಪಘಾತ: ಮೂವರು ಯುವಕರ ಸಾವು