ಸಿದ್ದರಾಮಯ್ಯ ಜೈಲಿನಲ್ಲಿರಬೇಕಾಗಿತ್ತು: ಮುನಿರತ್ನ

0
93
ಮುನಿರತ್ನ

ಇಡಿ ದಾಳಿ ಷಡ್ಯಂತ್ರ ಎನ್ನುವುದಾದರೆ ಇಷ್ಟೊತ್ತಿಗೆ ಸಿದ್ದರಾಮಯ್ಯನವರು ಜೈಲಿನಲ್ಲಿರಬೇಕಿತ್ತು ಎಂದು ಸಚಿವ ಮುನಿರತ್ನ ಹೇಳಿದ್ದಾರೆ.
ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರ ಇಡಿ ವಿಚಾರಣೆ ಕುರಿತು ಪ್ರತಿಕ್ರಿಯಿಸಿ, ಡಿಕೆಶಿ ಸಿಎಂ ಅಭ್ಯರ್ಥಿ ಎಂದು ಅವರಿಗೆ ಇಡಿ ನೋಟಿಸ್​ ನೀಡಿಲ್ಲ. ಹಾಗೆ ನೋಟಿಸ್‌ ನೀಡುವುದಾಗಿದ್ದರೆ ಸಿದ್ದರಾಮಯ್ಯ ಕೂಡ ಸಿಎಂ ಅಭ್ಯರ್ಥಿ ಅವರಿಗೂ ನೋಟಿಸ್‌ ನೀಡಬೇಕಿತ್ತು. ವೈಯಕ್ತಿಕ ದ್ವೇಷ ಎನ್ನುವುದಾದರೆ ಸಿದ್ದರಾಮಯ್ಯ ಜೈಲಿನಲ್ಲಿರಬೇಕಾಗಿತ್ತು. ವಿಚಾರದಲ್ಲಿ ಯಾವುದೇ ಷಡ್ಯಂತ್ರದ ಪ್ರಶ್ನೆಯೇ ಇಲ್ಲ. ಎಲ್ಲವೂ ಕಾನೂನಿನ ಪ್ರಕಾರ ಆಗುತ್ತದೆ ಎಂದರು.

Previous articleಪಂಚಮಸಾಲಿ ಮೀಸಲಾತಿ: ಸಿಎಂ ನಿವಾಸ ಎದುರು ಸತ್ಯಾಗ್ರಹದ ಎಚ್ಚರಿಕೆ
Next articleರಾಷ್ಟ್ರಪತಿಗೆ ಸಿದ್ಧಾರೂಢರ ಬೆಳ್ಳಿ ಮೂರ್ತಿ ಅರ್ಪಣೆ: ಮೇಯರ್ ಅಂಚಟಗೇರಿ