ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಸಾಧನೆ ಶೂನ್ಯ. ಒಂದು ವೇಳೆ ಸಾಧನೆ ಮಾಡಿದ್ದರೆ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಂಸದ, ಕೆಪಿಸಿಸಿ ವಕ್ತಾರ ವಿ.ಎಸ್. ಉಗ್ರಪ್ಪ ಸವಾಲು ಹಾಕಿದರು.
ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಹೆಸರಿನಲ್ಲಿ ಮತದಾರರ ಹೆಸರನ್ನೇ ತೆಗೆಸಿ ಹಾಕಿರುವುದು, ಬಿಜೆಪಿ ಸರ್ಕಾರದ ಆಡಳಿತದ ಪ್ರತಿ ಹಂತದಲ್ಲೂ ಶೇ. ೪೦ರಷ್ಟು ಲಂಚ ಪಡೆದುಕೊಂಡು ಬರುತ್ತಿರುವುದು, ಪಿಎಸ್‌ಐ ನೇಮಕಾತಿಯಲ್ಲಿ ಭ್ರಷ್ಟಾಚಾರ, ಎಡಿಜಿಪಿಯಂಥ ಅಧಿಕಾರಿಗಳೇ ಆರೋಪಿಗಳಾಗಿರುವುದು ಹೀಗೆ ಹತ್ತಾರು ಭ್ರಷ್ಟಾಚಾರದ ಹಗರಣಗಳಾಗಿವೆ. ಹಗರಣಗಳ ಕೂಪವೇ ಬಿಜೆಪಿ ಸರ್ಕಾರದ ಸಾಧನೆ ಎಂದು ಲೇವಡಿ ಮಾಡಿದರು.
                
























