ಸಮುದ್ರದ ಸುಳಿಗೆ ಸಿಲುಕಿದವರ ರಕ್ಷಣೆ

0
43

ಗೋಕರ್ಣ: ಮುಖ್ಯ ಕಡಲ ತೀರದಲ್ಲಿ ಸಮುದ್ರದ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗರನ್ನು ಕುಟುಂಬ ಸಮೇತರಾಗಿ ರಕ್ಷಿಸಿದ ಘಟನೆ ಮಧ್ಯಾಹ್ನ 12.30 ಸುಮಾರಿಗೆ ನಡೆದಿದೆ. ಹುಬ್ಬಳ್ಳಿ ಮೂಲದವರು ಕುಟುಂಬ ಸಮೇತರಾಗಿ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದು ಸಮುದ್ರದಲ್ಲಿ ಈಜುತ್ತಿದ್ದಾಗ ಜೀವ ರಕ್ಷಕರ ಮಾತನ್ನು ಲೆಕ್ಕಿಸದೆ ನೀರಿಗೆ ಇಳಿದಿದ್ದು ಸಮುದ್ರದ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗುತ್ತಿದ್ದ 7 ಜನರನ್ನು ಅಲ್ಲಿಯ ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿಗಳು ರಕ್ಷಿಸಿದ ಘಟನೆ ನಡೆದಿದೆ. ಜೀವ ರಕ್ಷಕ ಸಿಬ್ಬಂದಿಗಳಾದ ಶಿವಪ್ರಸಾದ ಅಂಬಿಗ, ಲೋಕೇಶ್ ಹರಿಕಂತ್ರ, ರಕ್ಷಿಸಿದ್ದು ಇವರಿಗೆ ಜೀವ ರಕ್ಷಕ ಸಿಬ್ಬಂದಿಗಳ ಮೇಲ್ವಿಚಾರಕರಾದ ರವಿ ನಾಯ್ಕ್, ಪ್ರವಾಸಿ ಮಿತ್ರ ರಾಜೇಶ್ ಅಂಬಿಗ,ಓಂ ವಾಟರ್ ಸ್ಪೋರ್ಟ್ಸ್ ಬೋಟಿಂಗ್ ಸಿಬ್ಬಂದಿಗಳಾದ ಬೋಟ್ ಡ್ರೈವರ್ ಭಗವಂತ ಬಿಜಾಪುರ್ ಇವರು ಸಹಾಯ ಮಾಡಿರುತ್ತಾರೆ. ಪರಶುರಾಮ (44) ರುಕ್ಮಿಣಿ (38)ಧೀರಜ್ (14) ಅಕ್ಷರ (14) ಖುಷಿ (13) ದೀಪಿಕಾ (12) ನಂದ ಕಿಶೋರ್ (10) ರಕ್ಷಣೆಗೊಳಗಾದವರು.

Previous articleವೃದ್ಧನಿಗೆ ಸಾರಿಗೆ ಬಸ್‌ ಡಿಕ್ಕಿ: ಸ್ಥಳದಲ್ಲೇ ಮೃತ್ಯು
Next articleಅರಿವು ಸಾಲ ಯೋಜನೆಗೆ ಹೆಚ್ಚುವರಿ ಅನುದಾನ